ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು: ಉದ್ಯಮಶೀಲತಾ ಪ್ರೇರಣಾ ತರಬೇತಿ

Last Updated 19 ನವೆಂಬರ್ 2021, 10:13 IST
ಅಕ್ಷರ ಗಾತ್ರ

ಸಿಂಧನೂರು: ಯುವತಿಯರು ಸ್ವಾವಲಂಬಿಯಾಗಿ ಜೀವನ ರೂಪಿಸಿಕೊಳ್ಳಲು ಉದ್ಯೋಗದ ಮಾಹಿತಿ ಸಂಪೂರ್ಣವಾಗಿ ಪಡೆಯಬೇಕು. ನಂತರ ಬರುವ ಉದ್ಯೋಗ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಕೌಶಲಾಭಿವೃದ್ಧಿ ಅಧಿಕಾರಿ ರಾಜೇಶ ಭಾವಗಿ ಹೇಳಿದರು.

ತಾಲ್ಲೂಕಿನ ಬಳಗಾನೂರು ಗ್ರಾಮದ ಚೌಡೇಶ್ವರಿ ಸಮುದಾಯ ಭವನದಲ್ಲಿ ಈಚೆಗೆ ನಡೆದ ಕೌಶಲ ತರಬೇತಿ ಪಡೆದ ಅಭ್ಯರ್ಥಿಗಳಿಗೆ 3 ದಿನಗಳ ಉದ್ಯಮಶೀಲತಾ ಪ್ರೇರಣಾ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಯಚೂರು ಸಿಡಾಕ್ ಜಂಟಿ ನಿರ್ದೇಶಕ ಜಿ.ಯು.ಹುಡೇದ್ ಮಾತನಾಡಿದರು.

ಸಮರ್ಥ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ವೀಣಾ, ಹಿರಿಯ ಸಂಪನ್ಮೂಲ ವ್ಯಕ್ತಿ ಬಸವರಾಜ ಸಿರವಾರ, ರಾಯಚೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಆಂಗ್ಲಭಾಷಾ ಪ್ರಾಧ್ಯಾಪಕ ಹನುಮಂತ ಕೊರಾಪುರ, ಮಾರುತಿ ಪತ್ತಿನ ಸೌಹಾರ್ದ ಸಹಕಾರಿಯ ಅಧಿಕಾರಿ ಮೌನೇಶ ಹೊಟ್ಟಿ, ಸಿಡಾಕ್‍ನ ತರಬೇತುದಾರ ಶಂಕರ ಎಸ್.ಕುಕ್ಕಾಪಾಟೀಲ್, ತರಬೇತುದಾರ ಪದ್ಮಾ ಆನಂದ ಹಟ್ಟಿ, ಎಚ್.ಗೀತಾ ಸುರೇಶ, ಮಲ್ಲಮ್ಮ ಶರಣಪ್ಪ ವಾಲೇಕಾರ, ಚಂದ್ರುಹಾಲಾಪುರ ಸೇರಿದಂತೆ ತರಬೇತಿ ಪಡೆದ ಅಭ್ಯರ್ಥಿಗಳು ಇದ್ದರು.

ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ ಬೆಂಗಳೂರು, ಧಾರವಾಡ ಕರ್ನಾಟಕ ಉದ್ಯಮಶೀಲತಾ ಕೇಂದ್ರ ಸಿಡಾಕ್, ಸಮರ್ಥ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ, ಕೌಶಲ ತರಬೇತಿ ಕೇಂದ್ರ ಬಳಗಾನೂರು ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT