ಸಿಂಧನೂರು (ರಾಯಚೂರು ಜಿಲ್ಲೆ): ಮುಂಗಾರು ಮತ್ತು ಹಿಂಗಾರು ಜೋಳ ಖರೀದಿಗೆ ರಾಜ್ಯ ಸರ್ಕಾರ ಮೀನಮೇಷ ಮಾಡುತ್ತಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಇತರ ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಕರೆ ನೀಡಿರುವ ಸಿಂಧನೂರು ಬಂದ್ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ.

ಸೋಮವಾರ ಬೆಳಗಿನ 5 ಗೆ ಟೆಯಿಂದಲೇ ಸಂಘಟನೆಗಳ ಕಾರ್ಯಕರ್ತರು ಬಸ್ ಡಿಪೊಕ್ಕೆ ತೆರಳಿ ಬಸ್ಗಳನ್ನು ಹೊರಗೆ ಬಿಡದಂತೆ ತಡೆದರು. ಪೊಲೀಸರು ರಾಯಚೂರಿನಿಂದ ಗಂಗಾವತಿ ಬಳ್ಳಾರಿ ಕುಷ್ಟಗಿ ಮತ್ತಿತರ ಕಡೆ ಹೋಗುವ ಬರುವ ಬಸ್ಗಳನ್ನು ಬೇರೆ ಪರ್ಯಾಯ ಮಾರ್ಗಗಳ ಮೂಲಕ ಕಳಿಸುವ ವ್ಯವಸ್ಥೆ ಮಾಡಿದರು.

ಎಪಿಎಂಸಿ, ಹಳೆಯ ಬಜಾರ್, ಬಸ್ ನಿಲ್ದಾಣ ರಸ್ತೆ,, ಗಂಗಾವತಿ ರಸ್ತೆ ಸೇರಿದಂತೆ ಎಲ್ಲ ಮಾರುಕಟ್ಟೆಗಳ ಕಿರಾಣಿ ಅಂಗಡಿಗಳು, ಹೋಟೆಲ್ ಗಳು ಸಣ್ಣಪುಟ್ಟ ಟೀ ಅಂಗಡಿಗಳು ಸೇರಿ ಎಲ್ಲ ಬಗೆಯ ವ್ಯವಹಾರ ವಹಿವಾಟುಗಳು ಸ್ಥಗಿತಗೊಂಡಿವೆ

ರಾಜ್ಯ ರೈತ ಸಂಘದ ಮುಖಂಡರಾದ ಅಮೀನ್ ಪಾಶಾ ದಿದ್ದಿಗಿ, ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಎಚ್. ಪೂಜಾರ ಬಸ್ವಂತರಾಯಗೌಡ ಪಾಟೀಲ, ಚಂದ್ರಶೇಖರ ಗೊರೆಬಾಳ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.