ಕೊಚ್ಚಿಹೋದ ರಸ್ತೆ: ಸಂಪರ್ಕ ಕಡಿತ

ಮಸ್ಕಿ (ರಾಯಚೂರು): ಚಾಮರಾಜನಗರ–ಬೀದರ್ (ಸಂಖ್ಯೆ 150ಎ) ರಾಷ್ಟ್ರೀಯ ಹೆದ್ದಾರಿಗೆ ಜಿಲ್ಲೆಯ ಮಸ್ಕಿ ತಾಲ್ಲೂಕಿನ ಸಂತೆಕಲ್ಲೂರಿನ ಸಿಂಗಸಿ ಹಳ್ಳದಲ್ಲಿ ನಿರ್ಮಿಸಿದ್ದ ಬೈಪಾಸ್ ರಸ್ತೆಯು ಮಳೆನೀರಿನ ರಭಸಕ್ಕೆ ಮಂಗಳವಾರ ರಾತ್ರಿ ಕೊಚ್ಚಿ ಹೋಗಿದೆ.
ಇದರಿಂದಾಗಿ ಕಲಬುರ್ಗಿ, ಬೀದರ್, ಯಾದಗಿರಿಯಿಂದ ಮಸ್ಕಿ ಮಾರ್ಗದ ಮೂಲಕ ಬೆಂಗಳೂರು ಮತ್ತು ಬಳ್ಳಾರಿಗೆ ತೆರಳುವ ವಾಹನಗಳ ಸಂಪರ್ಕ ಕಡಿತವಾಗಿದೆ. ಇದೀಗ 50 ಕಿಲೋ ಮೀಟರ್ ದೂರ ಸುತ್ತಿಕೊಂಡು ಲಿಂಗಸುಗೂರಿನ ಮೂಲಕ ವಾಹನಗಳ ಸಂಚರಿಸುತ್ತಿವೆ.
ಹಳ್ಳದಲ್ಲಿ ನಿರ್ಮಿಸಿದ್ದ ಸೇತುವೆಯು ಶಿಥಿಲವಾಗಿದ್ದರಿಂದ ಪರ್ಯಾಯವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ತಾತ್ಕಾಲಿಕ ಬೈಪಾಸ್ ನಿರ್ಮಾಣ ಮಾಡಿದ್ದರು. ರಸ್ತೆ ಕೊಚ್ಚಿ ಹೋಗಿದ್ದರಿಂದ ಶಾಲಾ, ಕಾಲೇಜುಗಳು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ತೊಂದರೆ ಅನುಭವಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.