ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಗಣತಿ ವರದಿ ಬಹಿರಂಗಪಡಿಸಿ: ಎಚ್.ಎಂ.ರೇವಣ್ಣ

Last Updated 9 ಅಕ್ಟೋಬರ್ 2021, 14:32 IST
ಅಕ್ಷರ ಗಾತ್ರ

ರಾಯಚೂರು: ಜಾತಿ ಜನಗಣತಿ ವರದಿ ಪ್ರಕಟಿಸುವಂತೆ ಆಗ್ರಹಿಸಿ ಶೀಘ್ರವೇ ವಿಧಾನಸೌಧ ಚಲೋ ಪ್ರತಿಭಟನೆಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್‌ ಮುಖಂಡ ಎಚ್.ಎಂ.ರೇವಣ್ಣ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿ ಮೊದಲಿಗೆ ಬ್ರಿಟೀಷರ ಅವಧಿಯಲ್ಲಿ ಕೈಗೊಳ್ಳಲಾಗಿತ್ತು. 1931ರಲ್ಲಿ ನಂತರ ಪ್ರಧಾನಿ ಪಿ.ವಿ. ನರಸಿಂಹರಾವ್ ಇದೇ ಮಾದರಿಯಲ್ಲಿ ಜನಗಣತಿ ಮಂಡಲ ಆಯೋಗ ಅನುಷ್ಠಾನನಕ್ಕೆ ಮುಂದಾಗಿದ್ದರು. ಸಿದ್ದರಾಮಯ್ಯ ಸರ್ಕಾರ ಜಾತಿ ಜನಗಣತಿ ಪ್ರಕ್ರಿಯೆ ಪೂರ್ಣಗೊಳಿಸಿದ್ದರು. ₹172 ಕೋಟಿ ವೆಚ್ಚದಲ್ಲಿ 1.53 ಶಿಕ್ಷಕರ ಸಮೀಕ್ಷೆ ನಿರ್ವಹಿಸಿದ್ದಾರೆ. ರಾಜ್ಯದ ಜಾತಿ ಗಣತಿ ಸಂಪೂರ್ಣ ವರದಿ ಸಂಗ್ರಹಿಸಲಾಗಿದೆ ಎಂದರು.

ವರದಿ ಪ್ರಕಟಿಸುವಂತೆ ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿ ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ಮನವಿ ಮಾಡಲಾಗಿತ್ತು. ಕುರುಬ ಸಮಾಜಕ್ಕಾಗಿ ವರದಿ ಬರೆಸಿದ್ದಾರೆ ಎಂದು ಹೇಳಿಕೆ ನೀಡಿ ಜಾರಿಕೊಂಡಿದ್ದರು ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರ ಜಾತಿ ಜನಗಣತಿ ವರದಿ ಪ್ರಕಟಿಸಲು ಸಬೂಬು ಹೇಳುತ್ತಿದೆ. ಕೇಂದ್ರ ಸರ್ಕಾರ ಮುಂದುವರೆದ ಸಮಾಜಗಳಿಗೆ ಆರ್ಥಿಕ ಆಧಾರದ ಮೇಲೆ ಶೇ 10 ಮೀಸಲಾತಿ ರಾಜ್ಯದಲ್ಲಿ ಹಿಂದುಳಿದ ಸಮಾಜಗಳಿಗೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.

ಸಮಾಜದ ಮುಖಂಡ ಸಿದ್ದಪ್ಪ ಭಂಡಾರಿ, ಡಾ.ನಾಗವೇಣಿ, ಅಯ್ಯಣ್ಣ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT