ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರವಾರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ- ಶಾಸಕ ರಾಜಾ ವೆಂಕಟಪ್ಪ ನಾಯಕ

₹ 3 ಕೋಟಿ ವೆಚ್ಚದ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಚಾಲನೆ
Last Updated 21 ಫೆಬ್ರುವರಿ 2022, 4:22 IST
ಅಕ್ಷರ ಗಾತ್ರ

ಸಿರವಾರ (ಮಾನ್ವಿ): ಸಿರವಾರ ಪಟ್ಟಣದಲ್ಲಿ ಎಲ್ಲಾ ವಾರ್ಡ್‌ಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವ ಮೂಲಕ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ಭಾನುವಾರ ಸಿರವಾರ ಪಟ್ಟಣದಲ್ಲಿ 2020-21ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ₹ 3ಕೋಟಿ ಅನುದಾನದಲ್ಲಿ ನೂತನ ಬಸ್ ನಿಲ್ದಾಣ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಚುನಾವಣೆ ಸಂದರ್ಭದಲ್ಲಿ ಮಾತ್ರ ಪಕ್ಷಗಳು ರಾಜಕಾರಣ ಮಾಡಬೇಕು. ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಸಲ್ಲದು. ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರೂ ಸಹಕರಿಸಬೇಕು . ಕಾಮಗಾರಿಯ ಗುತ್ತಿಗೆದಾರರು ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಬೇಕು. ಗುಣಮಟ್ಟದ ಕಾಮಗಾರಿ ನಿರ್ವಹಣೆಗೆ ಗಮನಹರಿಸಬೇಕು’ ಎಂದರು.

ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಕ್ಯಾಥೊಲಿಕ್ ಚರ್ಚ್ ಪಾಧರ್ ಭಗವಂತರಾಜ್, ಖಾಜಿ ಮಂಜುರ್ ಉಲ್ ಹಸನ್ ಸಾನ್ನಿಧ್ಯ ವಹಿಸಿದ್ದರು.

ವಾಣಿಜ್ಯೋದ್ಯಮಿ ಚುಕ್ಕಿ ಸೂಗಪ್ಪ ಸಾಹುಕಾರ್, ಜೆ. ಶರಣಪ್ಪ ಗೌಡ, ರಾಜಾ ರಾಮಚಂದ್ರ ನಾಯಕ, ಜಂಬುನಾಥ ಯಾದವ್, ಲೋಕರೆಡ್ಡಿ, ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಗಿ, ಬಿ.ನಾಗರಾಜ, ಕಾಶಿನಾಥ ಸರೋದೆ, ಈಶಪ್ಪ ಹೂಗಾರ, ಚಂದ್ರಶೇಖರ ಸ್ವಾಮಿ, ಪ್ರಕಾಶಪ್ಪ ಸಿರವಾರ, ಖಲೀಲ್ ಖುರೇಷಿ, ಗೋಪಾಲನಾಯಕ ಹರವಿ, ಯಲ್ಲಪ್ಪ ದೊರೆ, ನಾಗರಾಜ ಗೌಡ, ದಾನಪ್ಪ, ಗ್ಯಾನಪ್ಪ, ಬಂದೇನವಾಜ್, ತಹಶಿಲ್ದಾರವಿಜಯೇಂದ್ರ ಹುಲಿ ನಾಯಕ, ಸಾರಿಗೆ ನಿಗಮನದ ವಿಭಾಗೀಯ ನಿಯಂತ್ರಣಾಧಿಕಾರಿ ರವಿಕುಮಾರ, ಎಇಇ ಅಣ್ಣಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT