ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುದಿನದ ಕನಸು ಈಡೇರಿಕೆ: ಪ್ರತಾಪಗೌಡ ಪಾಟೀಲ

ಅಂಬಿಗರ ಚೌಡಯ್ಯ ಸಮುದಾಯ ಭವನ ಉದ್ಘಾಟನೆ
Published 15 ಫೆಬ್ರುವರಿ 2024, 13:52 IST
Last Updated 15 ಫೆಬ್ರುವರಿ 2024, 13:52 IST
ಅಕ್ಷರ ಗಾತ್ರ

ಮಸ್ಕಿ: ಅಂಬಿಗರ ಚೌಡಯ್ಯ ಅವರ ಹೆಸರಲ್ಲಿ ಸಮುದಾಯ ಭವನ ನಿರ್ಮಾಣ ಮಾಡಬೇಕು ಎಂಬ ಸಮಾಜದ ಬಹುದಿನದ ಕನಸು ಇಂದು ಈಡೇರಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಗುರುವಾರ ನಡೆದ ಅಂಬಿಗರ ಚೌಡಯ್ಯನವರ 904ನೇ ಜಯಂತಿ ಹಾಗೂ ನೂತನ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ನಾನು ಶಾಸಕರಾಗಿದ್ದ ಸಂದರ್ಭದಲ್ಲಿ ಸಮುದಾಯ ಭವನದ ನಿರ್ಮಾಣಕ್ಕೆ ಬೇಕಾದ ಭೂಮಿ ಹಾಗೂ ಅನುದಾನ ನೀಡುವ ಮೂಲಕ ಸಮಾಜದ ಕಾರ್ಯಕ್ಕೆ ಸಹಕಾರ ನೀಡಿದ್ದೆ. ಇದೀಗ ಈ ಭವನ ಸುಂದರವಾಗಿ ನಿರ್ಮಾಣವಾಗಿದ್ದು ಇಂದು ಉದ್ಘಾಟನೆಗೊಂಡಿದೆ. ಸಮಾಜದ ಕೆಲಸಗಳಿಗೆ ಈ ಭವನ ಸದ್ಬಳಕೆಯಾಗಲಿ ಎಂದರು.

ಗಚ್ಚಿನಮಠರ ವರರುದ್ರಮುನಿ ಸ್ವಾಮೀಜಿ, ಮುಖಂಡ ಎಚ್.‌ಬಿ.ಮುರಾರಿ, ಶ್ರೀಶೈಲಪ್ಪ ಬ್ಯಾಳಿ, ರಾಜಾ ನಾಯಕ, ನಾಗಭೂಷಣ, ಶರಣಯ್ಯ ಸೊಪ್ಪಿಮಠ, ಮಲ್ಲಯ್ಯ ಬಾರಕೇರ್‌, ಅಮರೇಶ ಪಾಮನಕೆಲ್ಲೂರು ಸೇರಿದಂತೆ ಇತರರು ಇದ್ದರು.

ಭಾವ ಚಿತ್ರದ ಮೆರವಣಿಗೆ: ಅಂಬಿಗರ ಚೌಡಯ್ಯನವರ ಭಾವಚಿತ್ರದ ಮೆರವಣಿಗೆ ಕನಕವೃತ್ತ, ಹಳೆಯ ಬಸ್‌ನಿಲ್ದಾಣ, ಅಗಸಿ, ಮುಖ್ಯ ಬಜಾರದ ಮೂಲಕ ಮೆರವಣಿಗೆ ನಡೆಯಿತು.

ಗಂಗಾಮತಸ್ಥ ಸಮಾಜದ ಸಮುದಾಯ ಭವನದ ಮುಂದೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮೆರವಣಿಗೆಗೆ ಚಾಲನೆ ನೀಡಿದರು.

ಗಂಗಾಮತಸ್ಥ ಸಮಾಜದ ನೂರಾರು ಮಹಿಳೆಯರು ಕುಂಭ ಹಾಗೂ ಕಳಸ ಹೊತ್ತು ಸಾಗಿದರು. ಸಿಂಗಾರಿ ಮೇಳಾ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಪಾಲ್ಗೊಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT