ರಾಯಚೂರು: ಜಿಲ್ಲೆಯಲ್ಲಿ ಅಕಾಲಿಕವಾಗಿ ಸುರಿಯುತ್ತಿರುವ ಮಳೆ ಹಾಗೂ ದಿಢೀರ್ ಕುಸಿಯುತ್ತಿರುವ ಭತ್ತದ ಬೆಲೆ ರೈತರಲ್ಲಿ ತಳಮಳ ಉಂಟು ಮಾಡಿದೆ.

ಸಿಂಧನೂರು, ಲಿಂಗಸುಗೂರು, ಮಾನ್ವಿ, ದೇವದುರ್ಗ ಹಾಗೂ ರಾಯಚೂರು ತಾಲ್ಲೂಕಿನಲ್ಲಿ ಕೆಲ ರೈತರು ಭತ್ತಕ್ಕೆ ಉತ್ತಮ ಬೆಲೆ ಸಿಗಬಹುದು ಎನ್ನುವ ಆಸೆಯಿಂದ ಹೊಲದಲ್ಲೇ ರಾಶಿ ಮಾಡಿಕೊಂಡು ಇಟ್ಟುಕೊಂಡಿದ್ದಾರೆ. ಭತ್ತದ ಬೆಲೆಯ ಏರಿಳಿತ ರೈತರ ನಿದ್ದೆಗೆಡಿಸಿದೆ.

ಶುಕ್ರವಾರ ಸಣ್ಣ ಭತ್ತ (ಸೋನಾ) ಪ್ರತಿ ಕ್ವಿಂಟಲ್ಗೆ ಕನಿಷ್ಠ ₹1,841, ಗರಿಷ್ಠ ₹2,301 ಇತ್ತು. ಶನಿವಾರ ಕನಿಷ್ಠ ₹1,889 ಹಾಗೂ ಗರಿಷ್ಠ ₹2,249ಕ್ಕೆ ಮಾರಾಟವಾಗಿದೆ. ರಾಜ ಹಂಸ ಭತ್ತ ಗರಿಷ್ಠ ₹1,549ಕ್ಕೆ, ದಪ್ಪ ಭತ್ತ (ಬುಡುಮ) ಕನಿಷ್ಠ ₹1,539 ಹಾಗೂ ಗರಿಷ್ಠ ₹1,550ಕ್ಕೆ ಮಾರಾಟವಾಗಿದೆ. ರಾಯಚೂರು ಎಪಿಎಂಸಿಗೆ ಶುಕ್ರವಾರ 10,947 ಕ್ವಿಂಟಲ್ ಹಾಗೂ ಶನಿವಾರ 10,579 ಕ್ವಿಂಟಲ್ ಸೋನಾ ಭತ್ತ ಆವಕವಾಗಿದೆ.

ಸೋಮವಾರ ಸಣ್ಣ ಭತ್ತ (ಸೋನಾ) ಪ್ರತಿ ಕ್ವಿಂಟಲ್ಗೆ ಕನಿಷ್ಠ ₹1,866, ಗರಿಷ್ಠ ₹ 2,252 ಮಾರಾಟವಾದರೆ, ರಾಜ ಹಂಸ ಭತ್ತ ಕನಿಷ್ಠ ₹1,541 ಹಾಗೂ ಗರಿಷ್ಠ 1,603ಕ್ಕೆ, ದಪ್ಪ ಭತ್ತ (ಬುಡುಮ) ಕನಿಷ್ಠ ₹1,566ಕ್ಕೆ ಮಾರಾಟವಾಗಿದೆ. ರಾಯಚೂರು ಎಪಿಎಂಸಿಗೆ ಸೋನಾ ಭತ್ತ 8816.8 ಕ್ವಿಂಟಲ್, ರಾಜಹಂಸಿ ಭತ್ತ 92.46 ಕ್ವಿಂಟಲ್ ಹಾಗೂ ದಪ್ಪ ಭತ್ತ 22.08 ಕ್ವಿಂಟಲ್ ಆವಕವಾಗಿದೆ.

‘ರಾಯಚೂರು ಎಪಿಎಂಸಿಯಲ್ಲಿ ಭತ್ತದ ಬೆಲೆ ತೀರಾ ಕನಿಷ್ಠ ಮಟ್ಟಕ್ಕೆ ಕುಸಿದಿಲ್ಲ. ಗುಣಮಟ್ಟಕ್ಕೆ ಅನುಗುಣವಾಗಿ ಬೆಲೆ ನಿಗದಿಪಡಿಸಲಾಗುತ್ತಿದೆ. ಬೆಲೆ ಸಾಮಾನ್ಯ ಸ್ಥಿತಿಯಲ್ಲಿ ಮುಂದುವರಿದಿದೆ’ ಎಂದು ರಾಯಚೂರು ಎಪಿಎಂಸಿ ಕಾರ್ಯದರ್ಶಿ ಆದಪ್ಪಗೌಡ ಹೇಳುತ್ತಾರೆ.

‘ದೇವದುರ್ಗ, ಲಿಂಗಸುಗೂರು, ಮಾನ್ವಿ, ಸುರಪುರ, ಶಹಾಪುರ ಹಾಗೂ ನೆರೆಯ ಆಂಧ್ರಪ್ರದೇಶದಿಂದಲೂ ಸಿಂಧನೂರು ಕೃಷಿ ಉತ್ಪನ್ನ ಮಾರುಕಟ್ಟೆಗೆ ರೈತರು ಭತ್ತ ಮಾರಾಟ ಮಾಡಲು ಬರುತ್ತಾರೆ. ನಾಲ್ಕೈದು ದಿನಗಳಿಂದ ಬೆಲೆ ಏರಿಳಿತವಾಗಿದೆ’ ಎನ್ನುತ್ತಾರೆ ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿ ರವಿಚಂದ್ರ.

‘ಭತ್ತದ ಬೆಲೆ ಕಡಿಮೆಯಾಗಿದೆ. ಹೀಗಾಗಿ ಸ್ವಲ್ಪ ದಿನ ಇಟ್ಟುಕೊಂಡು ನಂತರ ಮಾರಾಟ ಮಾಡಬೇಕೆಂದರೂ ಮಳೆಯ ಕಾಟ ಶುರುವಾಗಿದೆ’ ಎಂದು ಅಚ್ಚೊಳ್ಳಿ ಗ್ರಾಮದ ರೈತ ನಾಗರಾಜ ತಮ್ಮ ಅಳಲು ತೋಡಿಕೊಂಡರು.

‘ಭತ್ತಕ್ಕೆ ಸರ್ಕಾರ ₹2,300 ಬೆಂಬಲ ಬೆಲೆ ನಿಗದಿಪಡಿಸಿದೆ. ವಾಸ್ತವದಲ್ಲಿ ರೈತರಿಗೆ ಪ್ರತಿ ಕ್ವಿಂಟಲ್ಗೆ ₹600 ನಷ್ಟವಾಗುತ್ತಿದೆ. ರಾಜ್ಯ ಸರ್ಕಾರ ತುರ್ತಾಗಿ ಖರೀದಿ ಕೇಂದ್ರ ತೆರೆಯಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ಒತ್ತಾಯಿಸುತ್ತಾರೆ.

‘ಕಳೆದ ವರ್ಷ ಬೆಂಬಲ ಬೆಲೆಯಲ್ಲಿ ಸರ್ಕಾರ ಜೋಳ ಖರೀದಿಸಿದೆ. ಜಿಲ್ಲೆಯ ರೈತರು ಜೋಳ ಕೊಟ್ಟರೂ ಹಣ ಪಾವತಿ ಮಾಡಿಲ್ಲ. ಸರ್ಕಾರಗಳು ರೈತರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸುತ್ತಿಲ್ಲ. ರೈತ ಬೆಳೆದ ಉತ್ಪನ್ನಗಳಿಗೆ ಬೆಲೆ ದೊರೆಯದಿದ್ದರೆ ರೈತ ಕೃಷಿಯಿಂದ ವಿಮುಖವಾಗುವಂಥ ಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.