ಸಿಂಧನೂರು: ತಾಲ್ಲೂಕಿನ ರೌಡಕುಂದಾ ಮತ್ತು ಸಾಲಗುಂದಾ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಜೋಳ ಖರೀದಿಗೆ ನೋಂದಣಿ ಆರಂಭಿಸಿದ್ದಕ್ಕೆ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

ಜ.14ರಿಂದ ತಾಲ್ಲೂಕಿನಾದ್ಯಂತ ನೋಂದಣಿ ಕಾರ್ಯ ಆರಂಭಗೊಂಡರೂ ರೌಡಕುಂದಾ ಮತ್ತು ಸಾಲಗುಂದಾ ಸಹಕಾರ ಸಂಘಗಳಿಗೆ ನೋಂದಣಿ ಅವಕಾಶ ನೀಡಿರಲಿಲ್ಲ. ಯಾರೋ ಅರ್ಜಿ ಬರೆದು,‘ಸಮರ್ಪಕವಾಗಿಲ್ಲ. ಸಿಬ್ಬಂದಿ ಇಲ್ಲ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮತ್ತು ಜಿಲ್ಲಾಧಿಕಾರಿಗೆ ಕಾರಣ ಜೋಳ ಖರೀದಿಗೆ ನೋಂದಣಿಯನ್ನೇ ಪ್ರಾರಂಭಿಸಿರಲಿಲ್ಲ.

ಮಂಗಳವಾರ ನೋಂದಣಿ ಪ್ರಾರಂಭಿಸಿ 109 ರೈತರು ಥಂಬ್ ನೀಡಿದ್ದಾರೆ. 3,500 ಕ್ವಿಂಟಲ್ ಜೋಳ ನೋಂದಣಿಯಾಗಿದೆ ಎಂದು ರೌಡಕುಂದಾ ಕೃಷಿ ಮತ್ತು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹಾಂತೇಶ ಹಿರೇಗೌಡರ್ ತಿಳಿಸಿದ್ದಾರೆ.

ಜೋಳ ಖರೀದಿಗೆ ಸಹಕರಿಸಿದ ಶಾಸಕ ಹಂಪನಗೌಡ ಬಾದರ್ಲಿ, ತಹಶೀಲ್ದಾರ್ ಅರುಣ ಎಚ್. ದೇಸಾಯಿ ಮತ್ತು ಜಿಲ್ಲಾಧಿಕಾರಿ ನೀತಿಶ್ ಕೆ. ಅವರನ್ನು ರೈತ ಮುಖಂಡರಾದ ಕನಕಪ್ಪ ನಾಯಕ, ನಾಗಪ್ಪ ಬಾಣದ್, ಚಾಂದಪಾಷಾ ಹಿರೇಮನಿ, ಜಾವೇದ ತುರಕಟ್ಟಿ, ಖಾಸಿಂಸಾಬ್ ಬಾಕಲಿ, ಕರಿಯಪ್ಪ ಸಾಹುಕಾರ ಹರ್ಷ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.