ಶುಕ್ರವಾರ, ಫೆಬ್ರವರಿ 26, 2021
19 °C

ಕಣ್ವ ಮಠ: ಪೀಠಾಧಿಪತಿಯಾಗಿ ರಾಮಮೂರ್ತಿ ಆಚಾರ್ಯ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ/ರಾಯಚೂರು: ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಹುಣಸಿಹೊಳೆ ಕಣ್ವ ಮಠದ ನೂತನ ಪೀಠಾಧಿಪತಿಯಾಗಿ ನಿವೃತ್ತ ಶಿಕ್ಷಕ, ಬಳ್ಳಾರಿ ಜಿಲ್ಲೆಯ ಸಿರಗುಪ್ಪದ ರಾಮಮೂರ್ತಿ ಆಚಾರ್ಯ (81) ಅವರನ್ನು ಕಣ್ವ ಮಠದ ವಿಶ್ವಸ್ಥ ಮಂಡಳಿಯ ಉನ್ನತ ಮಟ್ಟದ ಸಭೆಯಲ್ಲಿ  ಆಯ್ಕೆ ಮಾಡಲಾಗಿದೆ ಎಂದು ಮಂಡಳಿ ಅಧ್ಯಕ್ಷ ರಾಯಚೂರಿನ ಎಸ್.ಕೆ.ಪೂರೋಹಿತ ತಿಳಿಸಿದ್ದಾರೆ.

ಆಯ್ಕೆ ಪ್ರಕ್ರಿಯೆಯನ್ನು ಆಕ್ಷೇಪಿಸಿರುವ ಮಠದ ವಿದ್ಯಾವಾರಿಧಿ ತೀರ್ಥ ಸ್ವಾಮೀಜಿ, ‘ಕಣ್ವ ಮಠದ ಅಭಿವೃದ್ಧಿ ಹಾಗೂ ಹಿತ ಕಾಪಾಡುವವರ ಅಭಿಪ್ರಾಯ ಪಡೆಯದೇ ನನ್ನನ್ನು ದ್ವೇಷಿಸುವ ಭಕ್ತರೇ ಸೇರಿ ಆಯ್ಕೆ ಮಾಡಿದ್ದಾರೆ. ಆಯ್ಕೆಯಾದವರ ಬಗ್ಗೆ ವಿರೋಧವಿಲ್ಲ. ಆದರೆ, ಆಯ್ಕೆ ಮಾಡಿದವರ ಬಗ್ಗೆ ಸಮ್ಮತಿ ಇಲ್ಲ’ ಎಂದು ತಿಳಿಸಿದ್ದಾರೆ.

‘ಏಕಪಕ್ಷೀಯ ನಿರ್ಧಾರಕ್ಕೆ ಸುರಪುರ ಸಂಸ್ಥಾನ ಒಪ್ಪುವುದಿಲ್ಲ. ‌ಬೆಂಗಳೂರು, ಹುಣಸಿಹೊಳೆ ಭಕ್ತರು ಸಭೆಯಲ್ಲಿ ಇರಲಿಲ್ಲ. ಎಲ್ಲ ಭಕ್ತರೂ ಸೇರಿ ಯೋಗ್ಯ ವ್ಯಕ್ತಿಯನ್ನು ಆರಿಸಿದಲ್ಲಿ ಪೀಠ ಹಸ್ತಾಂತರಿಸುವೆ’ ಎಂದು ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು