ಬುಧವಾರ, ಆಗಸ್ಟ್ 12, 2020
27 °C

ಯುವಕರಿಗೆ ಆದ್ಯತೆ ನೀಡಲು ಪಕ್ಷ ಸ್ಥಾಪನೆ: ಕೃಷ್ಣಾರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಭ್ರಷ್ಟಾಚಾರ, ಹಣಬಲದಿಂದ ರಾಜಕೀಯ ಅಧಿಕಾರ ಪಡೆಯುವ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿಯ(ಜೆಸಿಬಿ)ಯ ಹೊರತಾಗಿ ಪರ್ಯಾಯ ರಾಜಕೀಯ ಅಧಿಕಾರ ನೀಡುವ ಉದ್ದೇಶದೊಂದಿಗೆ ಯುವಕರಿಗಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್‌) ಸ್ಥಾಪನೆ ಮಾಡಲಾಗಿದೆ ಎಂದು ಪಕ್ಷದ ರಾಜ್ಯ ಅಧ್ಯಕ್ಷ ಕೃಷ್ಣಾರೆಡ್ಡಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ರಾಜಕೀಯ ಪರಿಸ್ಥಿತಿ ಬಿಗಡಾಯಿಸಿದೆ. ಅಪರಾಧಿಗಳು, ಅಪ್ರಮಾಣಿಕರು ರಾಜಕೀಯ ಅಧಿಕಾರ ಪಡೆದಿದ್ದಾರೆ. ನಿರುದ್ಯೋಗ, ಭ್ರಷ್ಟಾಚಾರ, ಪ್ರಾದೇಶಿಕ ಅಸಮತೋಲನಾ, ಕೃಷಿ ಬಿಕ್ಕಟ್ಟು ಹಾಗೂ ಇತರೆ ಜ್ವಲಂತ ಸಮಸ್ಯೆಗಳ ಬಗೆಹರಿಸಲು ವಿಫಲವಾಗಿದೆ. ರಾಜಕೀಯ ಪರಿಸ್ಥಿತಿ ಸರಿಪಡಿಸಲು ಪಕ್ಷ ಸ್ಥಾಪನೆ ಮಾಡಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಪಕ್ಷ ಸಂಘಟಿಸಲಾಗುವುದು ಎಂದರು.

ಸರ್ಕಾರ ಹೋರಾಟಗಳಿಗೆ ಮಣಿಯುತ್ತಿಲ್ಲ. ವ್ಯವಸ್ಥೆ ಬದಲಾವಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಯುವಕರು ಪಕ್ಷ ಸಿದ್ದಾಂತಕ್ಕೆ ಸಹಕರಿಸುವವರು ಪಕ್ಷ ಸೇರ್ಪಡೆಯಾಗಬಹುದು ಎಂದು ಹೇಳಿದರು.

ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ, ಶರಣು ಹೂಗಾರ್, ಪಲ್ಲೇದ್ ಶೇಖರ ಉಪ್ರಾಳ, ಹನುಮೇಶ ಹೂಗಾರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು