ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸಿ’

ಮಾನ್ವಿ: ಗಮನ ಸೆಳೆದ ಮಕ್ಕಳ ಕವಿಗೋಷ್ಠಿ, ಕೃತಿ ಅವಲೋಕನ
Last Updated 28 ನವೆಂಬರ್ 2019, 15:17 IST
ಅಕ್ಷರ ಗಾತ್ರ

ಮಾನ್ವಿ: ‘ಮಕ್ಕಳಲ್ಲಿ ಶಿಕ್ಷಣದ ಜತೆಗೆ ಸಾಹಿತ್ಯದಲ್ಲಿ ಆಸಕ್ತಿ, ಅಭಿರುಚಿ ಬೆಳೆಸುವುದು ಅವಶ್ಯ’ ಎಂದು ಬೆಳಕು ಸಂಸ್ಥೆಯ ರಾಜ್ಯ ಉಪಾಧ್ಯಕ್ಷ ಎಸ್‌.ಮಹಾಂತಪ್ಪಗೌಡ ಹೇಳಿದರು.

ಬುಧವಾರ ಪಟ್ಟಣದ ಕಲ್ಮಠ ಪ್ರೌಢಶಾಲೆ ಸಭಾಂಗಣದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಪ್ನಾ ಆರ್‌.ಎ. ರಚಿಸಿದ ‘ಭಾವಲಹರಿ’ ಕನವ ಸಂಕಲನದ ಅವಲೋಕನ ಹಾಗೂ ಮಕ್ಕಳ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್‌ ಅಧ್ಯಕ್ಷ ಶಂಕರದೇವರು ಹಿರೇಮಠ ಮಾತನಾಡಿ,‘ ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವುದರ ಜತೆಗೆ ಮಕ್ಕಳ ಸೃಜನಶೀಲ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ನಿರಂತರವಾಗಿ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ’ ಎಂದು ತಿಳಿಸಿದರು.

ತಾಲ್ಲೂಕು ಸಿರಿಗನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷ ಹುಸೇನಪ್ಪ ಕುರ್ಡಿ ಸ್ಪಪ್ನಾ ಆರ್.ಎ ಅವರ ‘ಭಾವಲಹರಿ’ ಕೃತಿಯ ವಿಮರ್ಶೆ ಮಂಡನೆ ಮಾಡಿದರು.ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಸೈಯದ್‌ ತಾಜುದ್ದೀನ್‌ ‘ಚೆಲುವ ಚಿಣ್ಣರು’ ಮಕ್ಕಳ ತ್ರೈಮಾಸಿಕ ಪತ್ರಿಕೆಯ ಲೋಕಾರ್ಪಣೆ ಮಾಡಿದರು.

ಕಲ್ಮಠ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪ್ರಭಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಅಂಬಮ್ಮ ಪ್ರತಾಪಸಿಂಗ್, ಗೌರವಾಧ್ಯಕ್ಷ ಯಲ್ಲಪ್ಪ ನಿಲೋಗಲ್‌, ಕಾರ್ಯದರ್ಶಿ ಗೋಪಾಲ ನಾಯಕ ಜೂಕೂರು, ಸಂಘಟನಾ ಕಾರ್ಯದರ್ಶಿ ಡಾ.ಸೈಯದ್‌ ಮುಜೀಬ್‌ ಅಹ್ಮದ್‌, ಲೇಖಕಿ ಸ್ಪಪ್ನಾ ಆರ್‌.ಎ, ಜಿಲ್ಲಾ ಬೆಳಕು ಸಂಸ್ಥೆಯ ಅಧ್ಯಕ್ಷ ನರಸಿಂಹ ವಡವಾಟಿ, ಹಿರಿಯ ಸಾಹಿತಿ ಶರಣೇಗೌಡ ಯರದೊಡ್ಡಿ, ಪಕ್ಷಿಪ್ರೇಮಿ ಸಲಾವುದ್ದೀನ್‌ ಗುತ್ತೇದಾರ, ಲಕ್ಷ್ಮಣರಾಯ್‌ ಕಪಗಲ್, ಉಮರ್‌ ಫಾರೂಕ್‌ ಇದ್ದರು.

ಸಾಹಿತಿ ಎಂ.ವೀರೇಶ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಪಟ್ಟಣದ ವಿವಿಧ ಶಾಲೆಗಳ 20ಕ್ಕೂ ಅಧಿಕ ಕವನ ವಾಚಿಸಿದರು. ಕವಿಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT