ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು | ಕಸ್ತೂರಿ ಕರ್ನಾಟಕ ಜನಪರ ವೇದಿಕೆ: ನೂತನ ಪದಾಧಿಕಾರಿಗಳ ನೇಮಕ

Published 13 ನವೆಂಬರ್ 2023, 12:32 IST
Last Updated 13 ನವೆಂಬರ್ 2023, 12:32 IST
ಅಕ್ಷರ ಗಾತ್ರ

ಸಿಂಧನೂರು: ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಸರ್ವ ಸದಸ್ಯರು ಸೋಮವಾರ ನಗರದ ಸಕ್ರ್ಯೂಟ್ ಹೌಸ್‍ನಲ್ಲಿ ಸಭೆ ನಡೆಸಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದರು.

ಇಸ್ಮಾಯಿಲ್ ಸುರ್ಕಿ (ಜಿಲ್ಲಾ ಕಾರ್ಯಾಧ್ಯಕ್ಷ), ಶೇಖ್ ದಾದಾಹುಸೇನ್ (ಜಿಲ್ಲಾ ಸಂಘಟನಾ ಕಾರ್ಯದರ್ಶಿ), ಶೇಖ್ ಶಾವಲಿ (ಜಿಲ್ಲಾ ಉಪಾಧ್ಯಕ್ಷ), ನೂರ್‍ಬಾಬಾ (ತಾಲ್ಲೂಕು ಅಧ್ಯಕ್ಷ), ಡಾ.ಅಲ್ಲಬಂದುಸಾಬ (ತಾಲ್ಲೂಕು ಗೌರವಾಧ್ಯಕ್ಷ)ರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ವೈ.ಬಿ.ಕಟ್ಟಿಮನಿ ಆದೇಶ ಪತ್ರ ನೀಡಿ ‘ಕನ್ನಡ ನೆಲ, ಜಲ, ಭಾಷೆ, ಗಡಿ ಹಾಗೂ ಖನಿಜ ಸಂಪತ್ತುಗಳನ್ನು ಉಳಿಸಲು ಹೋರಾಟ ಮಾಡಬೇಕು. ಸಮಾಜದಲ್ಲಿ ನಡೆಯುವ ಅನ್ಯಾಯ, ಅಕ್ರಮ, ಅವ್ಯವಹಾರಗಳು ಹಾಗೂ ಸಮಾಜಘಾತುಕ ಕೆಲಸಗಳ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಸಂಚಾಲಕ ರಂಜಾಕ್ ಸೇರಿದಂತೆ ಪದಾಧಿಕಾರಿಗಳು, ಯುವಕರು ಭಾಗವಹಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT