ಕವಿತಾಳ: ‘ಸಾಮೂಹಿಕ ವಿವಾಹ ಸಮಾರಂಭಗಳಿಂದ ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ’ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ಆರೂಢ ಅಯ್ಯಪ್ಪ ತಾತನವರ 44ನೇ ಮತ್ತು ಆರೂಢ ಕರಿಬಸವ ಸ್ವಾಮೀಜಿಯ 10ನೇ ಪುಣ್ಯಸ್ಮರಣೆ ಅಂಗವಾಗಿ ಸಮೀಪದ ಮಲ್ಲದಗುಡ್ಡ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪ್ರತಿ ವರ್ಷ ಸಾಮೂಹಿಕ ವಿವಾಹ ಏರ್ಪಡಿಸಿ, ಬಡ ಕುಟುಂಬಗಳಿಗೆ ಅನು ಕೂಲ ಕಲ್ಪಿಸುವುದು, ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ, ಪುರಸ್ಕರಿಸುವ ಆರೂಢ ಮಠದ ಸಂಪ್ರದಾಯ ಮಾದರಿಯಾಗಿದೆ’ ಎಂದರು.

ಗಲಗ ಮಠದ ಗಂಗಾಧರ ಸ್ವಾಮೀಜಿ, ಕೊಡೇಕಲ್ ಮಠದ ಸಂಗಯ್ಯ ಸ್ವಾಮಿ, ಯರಮರಸ್ನ ಕಲಿಗಣನಾಥ ಸ್ವಾಮೀಜಿ, ಆರೂಢ ಅಯ್ಯಪ್ಪ ತಾತ, ಅಬ್ಬಾಸ್ ಅಲೀ ತಾತ, ಮುಖಂಡ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಬಿಜೆಪಿ ಮುಖಂಡ ಪ್ರಸನ್ನ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ವಿವಾಹ ಸಮಾರಂಭದಲ್ಲಿ 11 ಜೋಡಿ ನವ ವಧು–ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಆರೂಢ ಅಯ್ಯಪ್ಪ ತಾತನವರ ತುಲಾಭಾರ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.