ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ವಿಹಾಳ: ಬಿಸಿಲಿನ ತಾಪಕ್ಕೆ ನಲುಗಿದ ಕೂಲಿಕಾರ್ಮಿಕರು

Published 12 ಮೇ 2024, 4:50 IST
Last Updated 12 ಮೇ 2024, 4:50 IST
ಅಕ್ಷರ ಗಾತ್ರ

ತುರ್ವಿಹಾಳ: ಹೆಚ್ಚುತ್ತಿರುವ ಬಿಸಿಲಿನ ನಡುವೆ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಕೂಲಿ ಕಾರ್ಮಿಕರಿಗೆ ಸಮರ್ಪಕ ಅನುಕೂಲತೆ ಇಲ್ಲದಿರುವುದರಿಂದ ಕಾರ್ಮಿಕರು ಸಂಕಷ್ಟ ಎದಿರುಸುವಂತಾಗಿದೆ.

ಇಲ್ಲಿಗೆ ಸಮೀಪದ ಗಾಂಧಿನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಯಮ್ಮ ಕ್ಯಾಂಪ್, ರಾಜಾಜಿನಗರ ಕ್ಯಾಂಪ್ ಹಾಗೂ ವೆಂಕಟೇಶ್ವರ ಕ್ಯಾಂಪ ಸೇರಿದಂತೆ ನರೇಗಾ ಯೋಜನೆಯಡಿ ನಿತ್ಯ 600 ಕೂಲಿ ಕಾರ್ಮಿಕರು ಹತ್ತಿಗುಡ್ಡ ಗ್ರಾಮದ ಬಳಿ ಇರುವ ಕೆರೆಯಲ್ಲಿ ಹೂಳೆತ್ತುವ ಕೆಲಸಕ್ಕೆ ಹೋಗುತ್ತಾರೆ. ಅಲ್ಲಿ ಸಮರ್ಪಕವಾಗಿ ನೀರು, ನೆರಳು ಹಾಗೂ ಔಷಧಗಳನ್ನು ಒದಗಿಸದೇ ತೊಂದರೆ ಅನುಭವಿಸುವಂತಾಗಿದೆ.

ಕೂಲಿಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ವಿಶ್ರಾಂತಿ ಹಾಗೂ ಊಟದ ನೆರಳಿಗೆ ಒಂದು ಟಂಟ್ ಹಾಕಲಾಗಿತ್ತು. 50 ಕಾರ್ಮಿಕರಿಗೆ ಅನುಕೂಲವಾಗಿತ್ತು ಊಳಿದವರು ಬಿಸಿಲಿನ ತಾಪಕ್ಕೆ ಅಂಜಿ ಕೆಲವರು ಟ್ರ್ಯಾಕ್ಟರ್ ಕೆಳಗಿನ ನೆರಳಿಗೆ ಹಾಗೂ ಇನ್ನೂ ಕೆಲವರು ತಪ್ಪದೇ ಟೆಂಟ್ ಕಟ್ಟಿಕೊಂಡು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಕುಡಿಯಲು ನೀರಿನ ಸಮಸ್ಯೆಯಿದೆ ಎಂದು ಮಹಿಳೆಯರು ದೂರಿದರೂ ಬಿಸಿಲಿನ ಜಳಕ್ಕೆ ಮಹಿಳೆಯರು ತಲೆ ತಿರುಗಿ ಬಿದ್ದರು ಅಧಿಕಾರಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ.

ನರೇಗಾ ಕೆಲಸ ಬರಗಾಲದಲ್ಲಿ ಹಳ್ಳಿ ಕೂಲಿಕಾರ್ಮಿಕರ ಬದುಕಿಗೆ ಆಸರೆಯಾಗಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮೇ1ರಂದು ಎನ್.ಎಂ.ಆರ್ ತೆಗೆದು ಮೇ.2ರಿಂದ 10ರವರೆಗೆ 7 ದಿನ ಕೂಲಿ ಕೆಲಸ ನೀಡಬೇಕಾಗಿತ್ತು. ಆದರೆ ಮೇ.2ರಂದು ಎನ್.ಎಂ.ಆರ್ ತೆಗೆದ ಕಾರಣಕ್ಕಾಗಿ 1 ದಿನ ಕೆಲಸ ಕಳೆದುಕೊಳ್ಳಬೇಕಾಗಿದೆ ಎಂದು ಬಸವರಾಜ ಗ್ಯಾಂಗಮಾನ್ ಆರೋಪಿಸಿದರು.

ನರೇಗಾ ಕೂಲಿಕಾರರ ಜಾಬ್ ಕಾರ್ಡ್ ಹಾಗೂ ಇನ್ನಿತರ ಕೆಲಸಗಳಲ್ಲಿ ನಿರಂತರ ಬೇಜಾವ್ದಾರಿ ತೊರುತ್ತಿರುವ ಪಂಚಾಯಿತಿ ಕಂಪ್ಯೂಟರ್ ಆಪರೇಟರ್‌ ಶ್ರೀದೇವಿ ಅವರ ಮೇಲೆ ಅಧಿಕಾರಿಗಳು ಶಿಸ್ತು ಕ್ರಮ ಜರುಗಿಸಬೇಕು ಎಂದು ನರೇಗಾ ಕೂಲಿಕಾರರಾದ ಯುವರಾಜ, ಅಮರೇಶ ತೆಲಗೂರು, ಮಾಂತಪ್ಪ ಇಟಲಾಪೂರ ಒತ್ತಾಯಿಸಿದ್ದಾರೆ.

ನರೇಗಾ ಕೂಲಿ ಕಾರ್ಮಿಕರಿಗೆ ಕೂಲಿ ಜತೆಗೆ ಅವರ ಆರೋಗ್ಯ ಕೂಡ ಕಾಪಾಡುವುದು ಅಧಿಕಾರಿಗಳ ಜವಾಬ್ದಾರಿ
ಮಂಜುನಾಥ ಗಾಂಧಿನಗರ, ರಾಜ್ಯ ದಲಿತ ಮುಖಂಡ
ನರೇಗಾ ಯೋಜನೆಯಲ್ಲಿ ಕೆರೆ ಹೂಳೆತ್ತುವ ಕೆಲಸಕ್ಕೆ ಟ್ರ್ಯಾಕ್ಟರ್ ಬಾಡಿಗೆ ಬಿಟ್ಟಿದ್ದೆ ಇನ್ನೂ ₹20 ಸಾವಿರ ಬಾಕಿ ಇದೆ ಎರಡು ವರ್ಷ ಗತಿಸಿದರು ಬಂದಿಲ್ಲ ಸಾಲದ ಒತ್ತಡವಿದೆ ಅಧಿಕಾರಿಗಳು ಕೂಡಲೇ ಹಣ ನೀಡಬೇಕು.
ಬಸವರಾಜ ಅಡವಿಬಾವಿ, ಗಾಂಧಿನಗರ
ನರೇಗಾ ಕೂಲಿಕಾರರಿಗೆ ಸ್ವಲ್ಪ ಮಟ್ಟಿಗೆ ನೆರಳಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ನಾಳೆ ಇನ್ನೂ ಹೆಚ್ಚಿನ ಅನುಕೂಲ ಕಲ್ಪಿಸಲಾಗುವುದು.
ಮಹ್ಮದ ಹನಿಫ್, ಪಿಡಿಒ, ಗಾಂಧಿನಗರ
ತುರ್ವಿಹಾಳ ಸಮೀಪದ ಹತ್ತಿಗುಡ್ಡ ಗ್ರಾಮ ಬಳಿ ಇರುವ ಕೆರೆಯಲ್ಲಿ ಗುರುವಾರ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರ್ಮಿಕರಿಗೆ ನೆರಳಿನ ಕೊರತೆಯಿಂದ ಟ್ರ್ಯಾಕ್ಟರ್ ಕೆಳಗೆ ವಿಶ್ರಾಂತಿ ಪಡೆಯುತ್ತಿರುವುದು
ತುರ್ವಿಹಾಳ ಸಮೀಪದ ಹತ್ತಿಗುಡ್ಡ ಗ್ರಾಮ ಬಳಿ ಇರುವ ಕೆರೆಯಲ್ಲಿ ಗುರುವಾರ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರ್ಮಿಕರಿಗೆ ನೆರಳಿನ ಕೊರತೆಯಿಂದ ಟ್ರ್ಯಾಕ್ಟರ್ ಕೆಳಗೆ ವಿಶ್ರಾಂತಿ ಪಡೆಯುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT