ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಕೊರತೆ: ವಿದ್ಯಾರ್ಥಿಗಳ ಶಿಕ್ಷಣ ಕುಂಠಿತ

ಶಿಥಿಲಾವಸ್ಥೆ ತಲುಪಿದ ಕೊಠಡಿಗಳು, ಬಿರುಕು ಬಿಟ್ಟ ಗೋಡೆ, ಶಾಲೆಯ ಬಯಲಲ್ಲೇ ಶೌಚ
Last Updated 8 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಸಿರವಾರ: ಉತ್ತಮವಾದ ಪರಿಸರ ವಾತಾವರಣ ಇದ್ದರೂ ಕಾಯಂ ಶಿಕ್ಷಕರು, ಮೂಲಸೌಕರ್ಯ ಕೊರತೆಯಿಂದಾಗಿ ಮಲ್ಲಟ ಗ್ರಾಮದ ಪ್ರೌಢಶಾಲೆ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

1 ರಿಂದ 10 ನೇ ತರಗತಿಯವರೆಗೆ 322 ಮಕ್ಕಳಿದ್ದಾರೆ. ಅದರಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ 32 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ.

ಉನ್ನತಿಕರಿಸಿದ ಶಾಲೆಯಾಗಿದ್ದ ಶಾಲೆಯನ್ನು2017–18ನೇ ಎಸ್ಸೆಸ್ಸೆಲ್ಸಿಯವರೆಗೆ ಪ್ರೌಢಶಾಲೆಯಾಗಿ ಮೇಲ್ದರ್ಜಗೇರಿಸಲಾಯಿತು. ಕಲ್ಯಾಣ ಕರ್ನಾಟಕದ ವಿಶೇಷ ಯೋಜನೆಯಲ್ಲಿ ಜಿಲ್ಲೆಯ 17 ಶಾಲೆಗಳಲ್ಲಿ ಮಾನ್ವಿ ಸಿರವಾರ ತಾಲ್ಲೂಕಿನ 5 ಶಾಲೆಗಳನ್ನು ಏಕಕಾಲದಲ್ಲಿ ಮೇಲರ್ಜೆಗೇರಿಸಿ ಸರ್ಕಾರ ಆದೇಶ ಹೊರಡಿಸಿ ಕೆಲವು ಕೊಠಡಿಗಳನ್ನು ನಿರ್ಮಿಸಿದ್ದು ಬಿಟ್ಟರೆ ಎಲ್ಲಿಯೂ ಕಾಯಂ ಶಿಕ್ಷಕರನ್ನು ನೇಮಿಸದೆ ನಿರ್ಲಕ್ಷ್ಯ ವಹಿಸಿದೆ.

ಅತಿಥಿ ಶಿಕ್ಷಕರು:ಕಳೆದ ವರ್ಷದಂತೆ ಈ ವರ್ಷವೂ ಶಿಕ್ಷಕರ ಕೊರತೆ ಮನಗಂಡ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇಬ್ಬರು ಅತಿಥಿ ಶಿಕ್ಷಕರು ಸೇರಿದಂತೆ ಮುಖ್ಯ ಶಿಕ್ಷಕ ಮತ್ತು ಸಹಶಿಕ್ಷಕರನ್ನು ಹಾಗೂ ವಾರಕ್ಕೆ ಮೂರು ದಿನಗಳಂತೆ ವಿಷಯವಾರು ಶಿಕ್ಷಕರನ್ನು ಎರವಲು ಸೇವೆ ಮೇಲೆ ನಿಯೋಜನೆ ಗೊಳಿಸಿದ್ದಾರೆ.

’ನಮಗೆ ಅತಿಥಿ ಮತ್ತು ಎರವಲು ಸೇವೆ ಶಿಕ್ಷಕರಿಂದ ಅಭ್ಯಾಸಕ್ಕೆ ತೊಂದರೆ ಆಗುತ್ತಿದ್ದು, ಶಾಲೆಗೆ ಕಾಯಂ ಶಿಕ್ಷಕರನ್ನು ನೇಮಿಸಿ’ ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಶಿಥಿಲಾವಸ್ಥೆಯ ಕಟ್ಟಡ:

ಶಾಲೆಯಲ್ಲಿರುವ ಎಲ್ಲಾ ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, ಮೇಲ್ಚಾವಣಿಯ ಕಾಂಕ್ರಿಟ್ ಎಲ್ಲಂದರಲ್ಲಿ ಕಿತ್ತುಹೋಗಿದೆ. ಇದರಿಂದ ಮಕ್ಕಳು ಶಿಕ್ಷಣ ಕಲಿಕೆಯತ್ತ ಗಮನಹರಿಸದೇ ಚಾವಣೆ ಯಾವಾಗ ನಮ್ಮ ಮೇಲೆ ಬೀಳುತ್ತದೆಯೇ ಎಂಬ ಭಯದಲ್ಲಿದ್ದಾರೆ. ಕೆಲವು ಕೊಠಡಿಗಳು ಬಿರುಕು ಬಿಟ್ಟಿದ್ದು, ಮುಂಭಾಗದಲ್ಲಿ ಹಾಸಿರುವ ಬಂಡೆಗಳು ಕಿತ್ತುಹೋಗಿವೆ.

ಶಾಲೆಯಲ್ಲಿ ಹತ್ತಕ್ಕೂ ಹೆಚ್ಚು ಶೌಚಗೃಹಗಳಿದ್ದರೂ ಸರಿಯಾದ ನಿರ್ವಹಣೆ ಇಲ್ಲದೇ ಉಪಯೋಗಕ್ಕೆ ಬಾರದಂತಾಗಿವೆ. ಇದರಿಂದ ಶಾಲೆಯ ವಿದ್ಯಾರ್ಥಿಗಳು ಶೌಚಕ್ಕಾಗಿ ಬಯಲನ್ನು ಅವಲಂಬಿಸಿದ್ದಾರೆ.

ಗ್ರಾಮ ಪಂಚಾಯಿತಿಯಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಎರಡು ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಅದಕ್ಕೆ ಯಾವುದೇ ಪೈಪ್ ಲೈನ್ ಮಾಡದೆ ನಿರುಪಯುಕ್ತವಾಗಿದೆ.

ಕಳಪೆ ಕಾಮಗಾರಿ:

ಕಳೆದ ತಿಂಗಳ ಹಿಂದೆ ಶಾಲೆಗೆ ನಿರ್ಮಿಸಲಾಗಿದ್ದ ತಡೆಗೋಡೆಯು ಸಂಪೂರ್ಣ ಕಳಪೆಯಾಗಿದ್ದು ಬಿರುಕು ಬಿಟ್ಟು, ಕೆಲವೆಡೆ ನೆಲಸವಾಗಿದೆ ಎಂದು ಪಾಲಕರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT