ಶುಕ್ರವಾರ, ನವೆಂಬರ್ 15, 2019
23 °C

ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಪ್ರತಿಭಟನೆ

Published:
Updated:
Prajavani

ರಾಯಚೂರು: ಎಲ್‌ಐಸಿ ಪ್ರೀಮಿಯಂ ಮೇಲೆ ವಿಧಿಸುವ ಜಿಎಸ್‌ಟಿ ಮತ್ತು ತಡವಾಗಿ ಪಾವತಿಸುವ ಪ್ರೀಮಿಯಂ ಮೇಲೆ ವಿಧಿಸುವ ದಂಡವನ್ನು ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘಟನೆ ನೇತೃತ್ವದಲ್ಲಿ ವಿಮಾ ಪ್ರತಿನಿಧಿಗಳು ಎಲ್‌ಐಸಿ ಕಚೇರಿಯ ಎದುರಿಗೆ ಬುಧವಾರ ಪ್ರತಿಭಟನೆ ನಡೆಸಿದರು.

ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ತಡೆಯಬೇಕು. ಪಾಲಸಿದಾರರಿಗೆ ಬೋನಸ್ ಹೆಚ್ಚಳ ಮಾಡಬೇಕು. ವಿಮಾ ಪ್ರೀಮಿಯಂ ಪಾವತಿ ಮೇಲೆ ಕೇಂದ್ರ ಸರ್ಕಾರ ವಿಧಿಸಿರುವ ಜಿಎಸ್‌ಟಿ ಸಂಪೂರ್ಣವಾಗಿ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ವಿಮಾ ಪ್ರತಿನಿಧಿಗಳಿಗೆ ಕಲ್ಯಾಣ ನಿಧಿ ಸ್ಥಾಪಿಸಿ ಸೌಲಭ್ಯ ನೀಡಬೇಕು. ವೈದ್ಯಕೀಯ ವೆಚ್ಚವನ್ನು ಪಾವತಿ ಮಾಡಬೇಕು. ವಿವಿಧ ವಿಭಾಗದ ಪ್ರತಿನಿಧಿಗಳಿಗೆ ಸೇವಾ ಭದ್ರತೆ ಒದಗಿಸಿ ರಕ್ಷಣೆ ಮಾಡಬೇಕು. ಗ್ರಾಚ್ಯಟಿ ಹಾಗೂ ಗುಂಪು ವಿಮೆ ಹೆಚ್ಚಿಸಬೇಕು ಎಂದು ವಿಭಾಗೀಯ ಅಧಿಕಾರಿಗೆ ಮನವಿ ಸಲ್ಲಿಸಿದರು.

ಸಂಘಟನೆ ಪದಾಧಿಕಾರಿಗಳಾದ ಎನ್.ಮಂಜುನಾಥ, ಶ್ರೀನಿವಾಸ, ಈರಣ್ಣ ಆರೋಲಿ, ಕೃಷ್ಣಾರೆಡ್ಡಿ, ಪಾಟೀಲ, ದೊಡ್ಡನಗೌಡ, ಶಿವರಾಜ, ಚನ್ನಾರೆಡ್ಡಿ, ಗೋವಿಂದ, ಮರಸಪ್ಪ, ಶ್ರೀನಿವಾಸ, ಬಸವರಾಜ, ತಿಮ್ಮಾರೆಡ್ಡಿ, ವೀರೇಶ ಇದ್ದರು.

ಪ್ರತಿಕ್ರಿಯಿಸಿ (+)