ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಿಲ ಭಾರತ ವಿಮಾ ಕಂಪನಿ ನೌಕರರ ಮುಷ್ಕರ

Last Updated 8 ಜನವರಿ 2020, 15:51 IST
ಅಕ್ಷರ ಗಾತ್ರ

ರಾಯಚೂರು: ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆಯ ಮೇರೆಗೆ ಅಖಿಲ ಭಾರತ ವಿಮಾ ನೌಕರರ ಸಂಘದ ಸದಸ್ಯರುವಿಭಾಗೀಯ ಕಚೇರಿ ಎದುರುಬುಧವಾರ ಒಂದು ದಿನದ ಮುಷ್ಕರ ನಡೆಸಿದರು.

ಕೇಂದ್ರ ಸರ್ಕಾರದ ವಿರೋಧಿ ನೀತಿಗಳನ್ನು ಕೈಬಿಡುವಂತೆ, ಅಗತ್ಯ ವಸ್ತುಗಳ ಬೆಲೆಗಳನ್ನು ಕೂಡಲೇ ನಿಯಂತ್ರಿಸಬೇಕು. ಸಾರ್ವಜನಿಕ ವಲಯದ ವಿಮಾ ಉದ್ದಿಮೆಯನ್ನು ಖಾಸಗೀಕರಣ ಮಾಡಬೇಡಿ, ಕಾರ್ಮಿಕರ ಕನಿಷ್ಠ ಕೂಲಿ ತಿಂಗಳಿಗೆ ₹21 ಸಾವಿರ ನಿಗದಿಪಡಿಸುವಂತೆ, ಕೃಷಿ ಉದ್ಯಮವನ್ನು ಬಲಪಡಿಸುವಂತೆ, ವಿಮಾ ಕಂತುಗಳ ಮೇಲಿನ ಜಿಎಸ್‌ಟಿಯನ್ನು ಹಿಂತೆಗೆಯುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಹೊಸ ಪಿಂಚಣಿಯನ್ನು ಕೈಬಿಟ್ಟು ಹಳೇ ಪಿಂಚಣಿ ವ್ಯವಸ್ಥೆ ಜಾರಿ ಮಾಡಲು, ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಕಲ್ಪಿಸುವಂತೆ ಮುಷ್ಕರ ನಿರತ ನೌಕರರು ಆಗ್ರಹಿಸಿದರು.

ಪ್ರಧಾನ ಕಾರ್ಯದರ್ಶಿ ಎಂ.ರವಿ,ಎಂ.ಶರಣಗೌಡ, ಕಾಂ.ಎ.ಶ್ರೀಧರ್, ಕಾಂ.ವಿ.ಹೆಚ್.ರಾಘವೇಂದ್ರ, ಎಲ್ಐಸಿ ವರ್ಗ-1 ನೌಕರರ ಸಂಘದ ಅಧ್ಯಕ್ಷ ಎಸ್.ಸೇತುರಾಮ, ಸಾಮಾನ್ಯ ವಿಮಾ ನೌಕರರ ಸಂಘದ ಕಾರ್ಯದರ್ಶಿ ಮೃತ್ಯಂಜೇಶ್ವರ್, ಅಭಿವೃದ್ಧಿ ಅಧಿಕಾರಿಗಳ ಸಂಘದ ಡಿ.ಬಿ.ಕಟ್ಟಿಮನಿ, ವೀರೇಶ, ಕ್ರಿಷ್ಣಮೂರ್ತಿ,ಜಮುನಾ.ವಿ.ಎಸ್, ಜಿ.ಲತಾ ಹಾಗೂ ರಾಯಚೂರು ವಿಭಾಗದ ಸೇರಿದಂತೆ 6 ಜಿಲ್ಲೆಗಳ 16 ಶಾಖೆಗಳ ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT