ಲಿಂಗಸುಗೂರು: ‘ಸಣ್ಣ ಪುಟ್ಟ ವ್ಯಾಜ್ಯಗಳು ಜರುಗುವುದು ಸಾಮಾನ್ಯ. ಸ್ವಾಭಿಮಾನ ಪಣಕ್ಕಿಟ್ಟು ಪರದಾಡುವುದಕ್ಕಿಂತ ಲೋಕ ಅದಾಲತ್ ಸದ್ಭಳಕೆ ಮಾಡಿಕೊಳ್ಳಬೇಕು. ರಾಜಿ ಸೂತ್ರವೇ ಸುಂದರ ಬದುಕಿಗೆ ದಾರಿ ದೀಪವಾಗಲಿದೆ’ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ ಹೇಳಿದರು.

ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ಉದ್ಘಾಟಿಸಿ ಮಾತನಾಡಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ. ಅಂಬಣ್ಣ ಮಾತನಾಡಿ, ‘ನ್ಯಾಯಾಲಯದಲ್ಲಿ ವಿವಿಧ ಕಾರಣಗಳಿಂದ ವಿಚಾರಣೆ ಹಂತದಲ್ಲಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಪೊಲೀಸ್, ವಕೀಲರು, ಕಕ್ಷಿದಾರರು ಆಯಾ ಗ್ರಾಮಗಳ ಹಿರಿಯರ ಸಮಕ್ಷಮ ಮಾತುಕತೆ ಮೂಲಕವೆ ಇತ್ಯರ್ಥ ಪಡಿಸಿಕೊಳ್ಳುವುದು ಸೂಕ್ತ. ರಾಜಿ ಸಂಧಾನದಿಂದ ಹಣ, ಸಮಯ, ನೆಮ್ಮದಿ ಉಳಿಯುತ್ತದೆ’ ಎಂದು ಸಲಹೆ ನೀಡಿದರು.

ರಾಜಿ ಸಂಧಾನ: ಬ್ಯಾಂಕ್‍ನ 14 ಪ್ರಕರಣಗಳಲ್ಲಿ 11 ಪ್ರಕರಣಗಳಲ್ಲಿ ₹1,15,21,122, 2008 ಬಾಕಿ ಪ್ರಕರಣ ಪೈಕಿ 1982 ಪ್ರಕರಣಗಳ ₹3,01,57,252 ಮೌಲ್ಯದ ಆಸ್ತಿ, ವ್ಯಾಜ್ಯ ಪೂರ್ವ 10,571 ಪ್ರಕರಣ ಪೈಕಿ 10,101 ಪ್ರಕರಣಗಳ ₹2,69,84,208 ಸೇರಿ ಒಟ್ಟು ₹6.86 ಕೋಟಿ ಮೌಲ್ಯದ 12,083 ಪ್ರಕರಣಗಳನ್ನು ಲೋಕ ಅದಾಲತ್‍ನದಲ್ಲಿ ಇತ್ಯರ್ಥಿ ಪಡಿಸಲಾಗಿದೆ.

ಸರ್ಕಾರಿ ಅಭಿಯೋಜಕಿ ಶೋಭಾ, ವಕೀಲರ ಸಂಘದ ಸದಸ್ಯರು, ನ್ಯಾಯಾಲಯದ ಸಿಬ್ಬಂದಿ, ಕಕ್ಷಿದಾರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.