ಮಕ್ಕಳನ್ನು ಪ್ರೀತಿಸಿದರೆ; ಅವರೂ ಪ್ರೀತಿಸುತ್ತಾರೆ

7
ಭಾರತೀಯ ವೈದ್ಯರ ಒಕ್ಕೂಟದ ರಕ್ತ ಭಂಡಾರದ ವೈದ್ಯಾಧಿಕಾರಿ ಡಾ. ರವಿ ರಾಜೇಶ್ವರ ಅಭಿಮತ

ಮಕ್ಕಳನ್ನು ಪ್ರೀತಿಸಿದರೆ; ಅವರೂ ಪ್ರೀತಿಸುತ್ತಾರೆ

Published:
Updated:
Deccan Herald

ರಾಯಚೂರು: ಪಾಲಕರು ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಮುಂದೆ ಮಕ್ಕಳು ಸಹ ಪಾಲಕರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಎಂದು ಭಾರತೀಯ ವೈದ್ಯರ ಒಕ್ಕೂಟದ ರಕ್ತ ಭಂಡಾರದ ವೈದ್ಯಾಧಿಕಾರಿ ಡಾ. ರವಿ ರಾಜೇಶ್ವರ ಅಭಿಪ್ರಾಯಪಟ್ಟರು.

ನಗರದ ವಿದ್ಯಾಭಾರತಿ ಸಿಬಿಎಸ್ಇ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಪಾಲಕರ ದಿನಾಚರಣೆ ಮಾತನಾಡಿದರು.

ಪಾಲಕರ ಬಗ್ಗೆ ಮಕ್ಕಳಲ್ಲಿ ಗೌರವ ಮೂಡಿಸುವ ಉದ್ದೇಶಕ್ಕಾಗಿ ಪಾಲಕರ ದಿನಾಚರಣೆ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಈ ಕಾರ್ಯಕ್ರಮದ ಮೂಲಕ ದೇಶದ ಸಂಸ್ಕೃತಿ ಉಳಿಸುವ ಕೆಲಸವೂ ಆಗುತ್ತಿದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಉತ್ತಮ ಮೌಲ್ಯಗಳನ್ನು ರೂಢಿಸಬೇಕು ಎಂದರು.

ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಮಕ್ಕಳನ್ನು ತೊಡಗಿಸಬೇಕು. ಇದರಿಂದ ವ್ಯಕ್ತಿತ್ವ ವಿಕಾಸಗೊಂಡು ಸಮಾಜದ ಆಗುಹೋಗುಗಳಿಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯೆಯ ಮಹತ್ವ ಮನವರಿಕೆ ಮಾಡಿದರೆ, ಓದುವುದಕ್ಕೆ ಹೆಚ್ಚು ಆಸಕ್ತಿ ಬೆಳೆಯುತ್ತದೆ. ಈ ಕೆಲಸವನ್ನು ವಿದ್ಯಾರ್ಥಿಗಳು ಮತ್ತು ಪಾಲಕರು ಒಟ್ಟಾಗಿ ಮಾಡಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾಭಾರತಿ ಶಿಕ್ಷಣ ಕೇಂದ್ರದ ಕಾರ್ಯದರ್ಶಿ ಡಾ. ರವಿರಾಜನ್‌ ಮಾತನಾಡಿ, ಆಧುನಿಕ ಯುಗದಲ್ಲಿ ಮೊಬೈಲ್‌ನಿಂದ ಸಾಕಷ್ಟು ಅನುಕೂಲವಾಗಿದೆ. ಅದೇ ರೀತಿ ಮೊಬೈಲ್‌ ಬಳಕೆಯು ಮಕ್ಕಳನ್ನು ಆಲಸಿಗಳನ್ನು ಮಾಡುತ್ತಿದ್ದು, ಬುದ್ಧಿ ಬೆಳವಣಿಗೆಗೆ ಮಾರಕವಾಗುವ ಸಾಧ್ಯತೆ ಇದೆ. ಹೀಗಾಗಿ ಅಗತ್ಯಕ್ಕೆ ತಕ್ಕಂತೆ ಮಾತ್ರ ಎಲ್ಲರೂ ಮೊಬೈಲ್‌ ಬಳಕೆ ಮಾಡುವುದು ಉತ್ತಮ ಎಂದು ಹೇಳಿದರು.

ವಿದ್ಯಾಭಾರತಿ ಶಿಕ್ಷಣ ಕೇಂದ್ರದ ಉಪಾಧ್ಯಕ್ಷ ಡಾ. ಎ.ಶಂಕರ್ , ಸದಸ್ಯರಾದ ಗಣೇಕಲ್ ಸೋಮಶೇಖರಗೌಡ , ಶಂಕರಪ್ಪ ಪಾಟೀಲ, ಆಡಳಿತಾಧಿಕಾರಿ ಮಹಾದೇವ ಹೆಗಡೆಕಟ್ಟೆ , ಪ್ರಾಚಾರ್ಯೆ ಕಾತ್ಯಾಯಿನಿ ಹೆಗಡೆಕಟ್ಟೆ , ಉಪ ಪ್ರಾಚಾರ್ಯ ಮುಕ್ತಾ ಪಟವಾರಿ, ವ್ಯವಸ್ಥಾಪಕರಾದ ಮುರಾರಿ ವೀರೇಶ ಇದ್ದರು.
ರೇಣುಕಾ ನಿರೂಪಿಸಿದರು. ಸುಜಾತ ಸ್ವಾಗತಿಸಿದರು. ಮಾಂಟೆಸ್ಸರಿ ವಿದ್ಯಾರ್ಥಿಗಳು ವಂದಿಸಿದರು.

ಪಾಲಕರ ಪಾದಪೂಜೆ

ಪಾಲಕರ ದಿನಾಚರಣೆ ನಿಮಿತ್ತ ಪಾಲಕರ ಪಾದಪೂಜೆ ವಿದ್ಯಾರ್ಥಿಗಳು ಮಾಡಿ, ನಮಸ್ಕರಿಸಿದರು. ಶಾಲಾ ಆವರಣದಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿತ್ತು. ಕೆಲವರು ಆನಂದ ಬಾಷ್ಪ ಹರಿಸಿದರು. ಮಕ್ಕಳ ಜೀವನದಲ್ಲಿ ಎಲ್ಲವೂ ಯಶಸ್ಸಿನಿಂದ ಕೂಡಿರಲಿ ಎಂದು ಹರಿಸಿದರು.

ಸಂಸ್ಕೃತ ಶಿಕ್ಷಕ ಕೃಷ್ಣಾಚಾರ ಅವರು ಪಾದಪೂಜೆಯ ಮಹತ್ವವನ್ನು ವಿವರಿಸಿದ್ದು ವಿಶೇಷವಾಗಿತ್ತು. ಪಾಲಕರಿಗೆ ವಿವಿಧ ಬಗೆಯ ಮನೋರಂಜನಾ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದ ಪಾಲಕರಿಗೆ ಪಾರಿತೋಷಕ ನೀಡಿ ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !