ಚಿನ್ನದ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಲು ಸಲಹೆ

7
ಕರಾಟೆ ಪಟು ಮಲ್ಲಮ್ಮಳಿಗೆ ಉಪ್ಪಾರ್‌ ಸಮಾಜದಿಂದ ನೆರವು

ಚಿನ್ನದ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಲು ಸಲಹೆ

Published:
Updated:
Deccan Herald

ರಾಯಚೂರು: ಸಿಂಗಾಪುರದಲ್ಲಿ ನಡೆಯುವ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಮಲ್ಲಮ್ಮ ಚಿನ್ನದ ಪದಕ ಗೆದ್ದು ದೇಶ ಹಾಗೂ ಸಮಾಜಕ್ಕೆ ಕೀರ್ತಿ ತರಬೇಕು ಎಂದು ಜಿಲ್ಲಾ ಉಪ್ಪಾರ್ ಸಮಾಜ ಸಂಘದ ಕಾರ್ಯದರ್ಶಿ ಗಟ್ಟು ಶ್ರೀನಿವಾಸ್ ಹೇಳಿದರು.

ನಗರದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಜಿಲ್ಲಾ ಉಪ್ಪಾರ ಸಮಾಜ ಸಂಘದಿಂದ ಮಂಗಳವಾರ ಏರ್ಪಡಿಸಿದ್ದ ಗಾಂಧಿಜಯಂತಿ ಹಾಗೂ ಮಲ್ಲಮ್ಮಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕರಾಟೆ ಕ್ರೀಡಾಪಟು ಮಲ್ಲಮ್ಮ ಉಪ್ಪಾರ, ‘ಚಿಕ್ಕ ವಯಸ್ಸಿನಿಂದ ಕಡುಬಡತನದಿಂದ ಬೆಳೆದಿದ್ದು ಎರಡನೇ ತರಗತಿ ಇದ್ದಾಗ ತಂದೆಯ ಮರಣವಾಯಿತು. ಆನಂತರ ಬೇರೆಯವರ ಮನೆಯಲ್ಲಿ ಕೆಲಸ ಮಾಡಿ ಜೀವನ ನಡೆಸಿದೆ. ಕರಾಟೆ ಕಲಿಯುವ ದೃಷ್ಟಿಯಿಂದ ವಿದ್ಯಾಭ್ಯಾಸದ ಜೊತೆಯಲ್ಲಿ ಬಳ್ಳಾರಿಯಲ್ಲಿ ಕರಾಟೆ ತರಬೇತಿ ಪಡೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದಿದ್ದೇನೆ’ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ವೆಂಕೋಬ ಉಪ್ಪಾರ ಮಾತನಾಡಿ, ಗಾಂಧಿ ಜೀವನವನ್ನು ವಿವರಿಸಿದರು.

ಮಲ್ಲಮ್ಮ ಅವರಿಗೆ ಸಮಾಜದ ಸಂಘದಿಂದ ಆರ್ಥಿಕ ನೆರವು ಒದಗಿಸಲಾಯಿತು. ಗಾಂಧಿ ಜಯಂತಿ ನಿಮಿತ್ತ ಉಪ್ಪಾರವಾಡಿ ಸುತ್ತಮುತ್ತ ಪ್ರದೇಶದಲ್ಲಿ ಸ್ವಚ್ಛತೆ ಕಾರ್ಯಕ್ರಮ ನಡೆಸಲಾಯಿತು.

ಸಂಘದ ಮಾಜಿ ಅಧ್ಯಕ್ಷ ಅಂಬರೀಷ್ ಅದೋನಿ, ಗಿರಿಮಲ್ಲಪ್ಪ ಕಟ್ಟಿಮನಿ , ದೇವಸ್ಥಾನದ ಅಧ್ಯಕ್ಷ ಯು.ಚಂದ್ರಮೌಳಿ , ಮಹಿಳಾ ಅಧ್ಯಕ್ಷ ಪಿ.ಸುರೇಖಾ, ನವ ಯುವಕರ ಸಂಘದ ಅಧ್ಯಕ್ಷ ಜೂಕೂರು ಶ್ರೀನಿವಾಸ್, ಕಾರ್ಯದರ್ಶಿ ಆರ್. ಶ್ರೀನಿವಾಸ್ ಹಾಗೂ ಸಮಾಜದ ಉಪಾಧ್ಯಕ್ಷ ಜನಾರ್ದನ್, ಗಣಮೂರು ಶ್ರೀನಿವಾಸ್, ವೆಂಕಟೇಶ ಕೆ., ದೇವನಪಲ್ಲಿ ರಾಮಪ್ಪ ,ಹಾಲ್ವಿ ಶ್ರೀನಿವಾಸ್, ಭಾಸ್ಕರ್ ಡಿ ರಾಂಪುರ, ಸಂಘಟನಾ ಕಾರ್ಯದರ್ಶಿ ಐನಾಪುರ ಆಂಜನೇಯ, ಸಮಾಜದ ಮುಖಂಡರಾದ ಎಂ ಚಂದ್ರಶೇಖರ್ , ಮಿರ್ಜಾಪುರ ಪಾಗುಂಟಪ್ಪ , ಎಸ್. ಎಲ್. ವೀರೇಶ್ ,ಎಸ್ .ಶ್ರೀನಿವಾಸ , ಸುಭಾಷ್ ಚಂದ್ರ , ಚಿದಾನಂದ್, ಲಕ್ಷ್ಮೀಪತಿ ಬಸವರಾಜ್, ಸಿದ್ದಲಿಂಗ, ನವೀನ್ ಕುಮಾರ್, ರವಿ ಕುಮಾರ್ ಅಂಬರೀಶ್ ಸಾಗರ್, ಸುರೇಶ್ ,ಚಂದ್ರಬಂಡ ನಾಗರಾಜ್, ಸತ್ಯನಾರಾಯಣ ,ಸಂತೋಷ್ ಸಾಗರ ಹಾಗೂ ಹಿರಿಯ ಮುಖಂಡರಾದ ಎಸ್. ನಾರಾಯಣಪ್ಪ ಹಾಗೂ ಡಿ ನಾರಾಯಣಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !