ಶಾಸಕ ರೇಣುಕಾಚಾರ್ಯಗೆ ಆರತಿ ಬೆಳಗುವಾಗ ಮಹಿಳೆ ತಲೆಕೂದಲಿಗೆ ಬೆಂಕಿ

ಮಸ್ಕಿ: ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಣ್ಣೂರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರ ಪ್ರಚಾರಕ್ಕೆ ಬಂದಿದ್ದ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರಿಗೆ ಆರತಿ ಬೆಳಗಲು ಬಂದಿದ್ದ ಮಹಿಳೆಯ ಕೂದಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿತು.
ಮಹಿಳೆಯರು ಆರತಿ ಬೆಳಗಲು ಸರದಿಯಲ್ಲಿ ನಿಂತಿದ್ದರು. ಒಬ್ಬ ಮಹಿಳೆ ಹಿಡಿದಿದ್ದ ಆರತಿ ಮುಂದೆ ನಿಂತಿದ್ದ ಇನ್ನೊಬ್ಬ ಮಹಿಳೆಯ ಕೂದಲಿಗೆ ತಾಗಿದ್ದರಿಂದ ಬೆಂಕಿ ಹೊತ್ತಿಕೊಂಡಿತು. ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ತಕ್ಷಣವೇ ಕೂದಲಿನ ಬೆಂಕಿ ನಂದಿಸಿದರು. ತನ್ನ ಕೂದಲಿಗೆ ಬೆಂಕಿ ತಗುಲಿದ್ದು ಆ ಮಹಿಳೆಗೆ ತಕ್ಷಣಕ್ಕೆ ಗೊತ್ತಾಗಲಿಲ್ಲ. ಆರತಿ ಬೆಳಗಿದ ಮಹಿಳೆಯರಿಗೆ ರೇಣುಕಾಚಾರ್ಯ ತಲಾ ₹ 100 ಕೊಟ್ಟರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.