ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕವಿತಾಳ: ಕುಡಿಯುವ ನೀರಿನ ಕೆರೆ ಭರ್ತಿಗೆ ಶಾಸಕರ ಸೂಚನೆ

Published 24 ಜೂನ್ 2024, 16:17 IST
Last Updated 24 ಜೂನ್ 2024, 16:17 IST
ಅಕ್ಷರ ಗಾತ್ರ

ಕವಿತಾಳ: ಇರಕಲ್ ಗ್ರಾಮದ ಕುಡಿಯುವ ನೀರಿನ ಕೆರೆಗೆ ಸೋಮವಾರ ಭೇಟಿ ನೀಡಿದ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರು ಕಾಲುವೆ ನೀರು ಸ್ಥಗಿತವಾಗುವುದರೊಳಗೆ ಕೆರೆಗೆ ನೀರು ಭರ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

’ಕುಡಿಯುವ ನೀರಿನ ಕೆರೆಗಳ ಭರ್ತಿಗೆ ಕಾಲುವೆಗೆ ನೀರು ಹರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಿರ್ಲಕ್ಷ ಮಾಡದೇ ಕೆರೆ ಭರ್ತಿಗೆ ಅಧಿಕಾರಿಗಳು ಕಾಳಜಿ ವಹಿಸಬೇಕು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕುʼ ಎಂದು ಹೇಳಿದರು.

ಪ್ರಭಾರ ಪಿಡಿಒ ಕೃಷ್ಣ ಹುನುಗುಂದ ಅವರನ್ನು ವರ್ಗಾವಣೆ ಮಾಡದಂತೆ ಸದಸ್ಯರು ಶಾಸಕರಿಗೆ ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ, ಪಿಡಿಒ ಕೃಷ್ಣ ಹುನುಗುಂದ, ಮುಖಂಡರಾದ ವೆಂಕಟರಡ್ಡಿ ಹಾಲಾಪುರ, ಬಲವಂತರಾಯ ವಟಗಲ್‌, ಕರಿಯಪ್ಪ ಹಾಲಾಪುರ, ಶಿವಪ್ಪ ಚಿಲ್ಕರಾಗಿ, ಬಸವರಾಜ ಬುಂಕಲದೊಡ್ಡಿ, ರಾಜು ಕಲ್ಯಾಣಿ, ಆದನಗೌಡ ಹರ್ವಾಪುರ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT