ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಹರಂ: ಗಮನ ಸೆಳೆದ ಹೆಜ್ಜೆ ಕುಣಿತ

Published 25 ಜುಲೈ 2023, 12:32 IST
Last Updated 25 ಜುಲೈ 2023, 12:32 IST
ಅಕ್ಷರ ಗಾತ್ರ

ಕವಿತಾಳ: ಮೊಹರಂ ಹಬ್ಬದ ನಿಮಿತ್ತ ಪಟ್ಟಣದಲ್ಲಿ ಮಂಗಳವಾರ ನಡೆದ ಹೆಜ್ಜೆ ಕುಣಿತ ಸಾರ್ವಜನಿಕರ ಗಮನ ಸೆಳೆಯಿತು.

ಲಿಂಗಸುಗೂರು ತಾಲ್ಲೂಕಿನ ಕೋಠಾ ಗ್ರಾಮದಿಂದ ಆಗಮಿಸಿದ್ದ ಯುವಕರ ತಂಡದ ಹೆಜ್ಜೆ ಕುಣಿತಕ್ಕೆ ಸಾರ್ವಜನಿಕರು ತಲೆದೂಗಿದರು. ಒಂದು ಕೈಯಲ್ಲಿ ಸಿಂಗರಿಸಿದ್ದ ಛತ್ರಿ ಮತ್ತು ಇನ್ನೊಂದು ಕೈಯಲ್ಲಿ ಬಣ್ಣ ಬಳಿದ ಕೋಲು ಹಿಡಿದಿದ್ದ ಯುವಕರು ತುಂತುರು ಮಳೆಯಲ್ಲಿ ಹಲಗೆ ಶಬ್ದಕ್ಕೆ ಪರಸ್ಪರ ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು.

‘ಮೊಹರಂ ಹಬ್ಬದ ನಿಮಿತ್ತ ಪ್ರತಿವರ್ಷ ಯುವಕರ ತಂಡ ಹಳ್ಳಿ ಹಳ್ಳಿಗೆ ತೆರಳಿ ಹೆಜ್ಜೆ ಕುಣಿತ ಪ್ರದರ್ಶನ ಮಾಡುತ್ತಾರೆ, ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಖುಷಿಯಾಗಿ ಹಣ ನೀಡುತ್ತಾರೆ ಇದೊಂದೆ ಸಂಪ್ರದಾಯ’ ಎಂದು ತಂಡದ ಪ್ರಮುಖ ಅಮರೇಶ ಹೇಳಿದರು.

ಕವಿತಾಳದಲ್ಲಿ ಕೋಠಾ ಗ್ರಾಮದ ಯುವಕರು ಮಂಗಳವಾರ ಮೊಹರಂ ನಿಮಿತ್ತ ಹೆಜ್ಜೆ ಕುಣಿತ ಹಾಕಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT