ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕಾರ ಬೆಳಸುವಲ್ಲಿ ತಾಯಂದಿರ ಪಾತ್ರ ಮಹತ್ವದ್ದು: ಸಂತೋಷ ಕುಮಾರ್

Last Updated 13 ಮೇ 2019, 13:26 IST
ಅಕ್ಷರ ಗಾತ್ರ

ರಾಯಚೂರು: ಮಗುವಿನ ಪ್ರಾಥಮಿಕ ಹಂತದಲ್ಲಿ ಉತ್ತಮ ಸಂಸ್ಕಾರ ನೀಡಬೇಕು. ಮಗುವಿನ ಉಜ್ವಲ ಭವಿಷ್ಯ ನಿರ್ಮಾಣ ಮಾಡುವಲ್ಲಿ ತಾಯಿ ನೀಡುವ ಸಂಸ್ಕಾರ ಮಹತ್ವದ್ದಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಯಚೂರು ಜಿಲ್ಲೆಯ ನಿರ್ದೇಶಕ ಸಂತೋಷ ಕುಮಾರ್ ಹೇಳಿದರು.

ನಗರದ ದೇವರ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದಿಂದ ಭಾನುವಾರ ಏರ್ಪಡಿಸಿದ್ದ ವಿಶ್ವ ತಾಯಂದಿರ ದಿನಾಚರಣೆ ಮತ್ತು ಮಾತೆಯರನ್ನು ಗುರುತಿಸಿ ಗೌರವಿಸುವ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾಯಿಯ ಸ್ಥಾನವನ್ನು ಜಗತ್ತಿನ ಯಾವ ಸಂಪತ್ತೂ ತುಂಬಿಸಲಾಗದು. ಅಂತಹ ಅಪೂರ್ವ ಸಂಪತ್ತಿಗಾಗಿ ಮಿಸಲಿರುವ ದಿನ ಇದಾಗಿದೆ. ಅಜ್ಞಾನದ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಬೆಳಕನ್ನು ಹರಿಸಲು ತಾಯಿ ಎನ್ನುವ ಎರಡಕ್ಷರದ ಮಹಾವಂತ್ರವೇ ಸಾಕು. ತಾಯಿ ಎಂದರೆ ಮಾತೃ ಸ್ವರೂಪಿ ಕ್ಷೇಮಯಾಧರಿತ್ರಿ ಎಂದು ನುಡಿದರು

ತಾಲ್ಲೂಕು ಯೋಜನಾಧಿಕಾರಿ ರಘುಪತಿ ಗೌಡ, ಒಕ್ಕೂಟದ ಅಧ್ಯಕ್ಷೆ ಹುಸೇನ್ ಬಾನು, ಅನ್ನಪೂರ್ಣ ಇದ್ದರು.

ಲಕ್ಷ್ಮೀ ಸ್ವಾಗತಿಸಿದರು. ಈಶಪ್ಪ ನಿರೂಪಿಸಿದರು. ಮಹಾಂತೇಶ ಪಿ. ಹಿರೇಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT