ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸ್ಕಿ: ಆರ್‌ಎಸ್‌ಎಸ್ ಪಥ ಸಂಚಲನ

Last Updated 23 ಅಕ್ಟೋಬರ್ 2021, 12:10 IST
ಅಕ್ಷರ ಗಾತ್ರ

ಮಸ್ಕಿ: ವಿಜಯ ದಶಮಿ ನಿಮಿತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶನಿವಾರ ಆರ್‌ಎಸ್‌ಎಸ್ ಸ್ವಯಂ ಸೇವಕರ ಪಥ ಸಂಚಲನವು ಸಂಘದ ವಾದ್ಯ ಘೋಷದೊಂದಿಗೆ ನಡೆಯಿತು.

ನರಸನಗೌಡ ಸ್ಮಾರಕ ಪ್ರೌಢ ಶಾಲೆಯಿಂದ ಆರಂಭವಾದ ಪಥ ಸಂಚಲನ ವಾಲ್ಮೀಕಿ ನಗರ, ಅಶೋಕ ವೃತ್ತ, ಚನ್ನಮ್ಮ ವೃತ್ತ, ದೈವದಕಟ್ಟೆ ಮಾರ್ಗವಾಗಿ ನಡೆಯಿತು.

ಪಥ ಸಂಚಲನ ಸಂಚರಿಸುವ ದಾರಿಯುದ್ದಕ್ಕೂ ಕೆಸರು ಬಾವುಟಗಳು ರಾಜಾಜಿಸುತ್ತಿದ್ದವು. ರಸ್ತೆಗಳನ್ನು ರಂಗೋಲಿ ಹಾಕಿ ಸಿಂಗಾರಗೊಳಿಸಲಾಗಿತ್ತು. ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳು ರಾಷ್ಟ್ರಪುರುಷರ ಪೋಷಕ ಧರಿಸಿ ಪಥ ಸಂಚಲನಕ್ಕೆ ಸ್ವಾಗತ ಕೋರಿದರು.

ಪಥ ಸಂಚಲನ ಸಂಚರಿಸುವ ರಸ್ತೆಗಳ ಅಕ್ಕಪಕ್ಕದ ಮನೆಯ ಮೇಲೆ ನಿಂತ ಮಹಿಳೆಯರು ಭಾಗವದ್ಜಜಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಪಥ ಸಂಚಲನ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ಎಸ್.ಎಸ್. ಹುಲ್ಲೂರು ನೇತೃತ್ವದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಸಂಜೀವ್ ಬಳಿಗಾರ್, ಸಬ್ ಇನ್‌ಸ್ಪೆಕ್ಟರ್ ಸಿದ್ಧರಾಮ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು.

ನಂತರ ನರಸಗೌಡ ಸ್ಮಾರಕ ಪ್ರೌಢ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಿಂದ ಆಕರ್ಷಕ ಕವಾಯಿತು ನಡೆಯಿತು.

ಸಂಘದ ಪ್ರಮುಖ ಗೋಪಿನಾಥ ವಿಶೇಷ ಉಪನ್ಯಾಸ ನೀಡಿದರು. ಲಿಂಗಯ್ಯ ತಾತ ಬಳಗಾನೂರು ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಮುಖಂಡ ಮಹಾದೇವಪ್ಪಗೌಡ ಪೋಲಿಸ್ ಪಾಟೀಲ್, ಶಿವಶಂಕ್ರಪ್ಪ ಹಳ್ಳಿ, ಮಲ್ಲಿಕಾರ್ಜುನ ಬ್ಯಾಳಿ, ಪಾಂಡುರಂಗ ಆಪ್ಟೆ,‌ ವಸಂತ ಸೇರಿದಂತೆ ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT