ರಾಯಚೂರು: ಜಿಲ್ಲೆಯಲ್ಲಿ ಕೆಲವೆಡೆ ಹೆಸರು/ ಉದ್ದು ಬೆಳೆಯಲ್ಲಿ ತುಕ್ಕು (ತಾಮ್ರ) ರೋಗಬಾಧೆ ಕಂಡು ಬಂದಿದ್ದು, ರೋಗ ನಿಯಂತ್ರಣಕ್ಕೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆಯ ಪ್ರಭಾರ ಜಂಟಿ ನಿರ್ದೇಶಕ ಜಯಪ್ರಕಾಶ ತಿಳಿಸಿದ್ದಾರೆ.
ಬಾಧೆಯ ಲಕ್ಷಣಗಳು: ಮೊದಲು ಎಲೆಗಳ ಕೆಳಭಾಗದಲ್ಲಿ ಕಂದು ಬಣ್ಣದ ಚುಕ್ಕೆಯ ಲಕ್ಷಣಗಳು ಕಂಡುಬಂದು ನಂತರ ಎಲೆಯ ಎಲ್ಲ ಭಾಗಗಳಲ್ಲಿ ಆವರಿಸಿ, ನಂತರ ಬೆಳೆ ಸುಟ್ಟಂತಾಗುತ್ತದೆ.
ರೋಗ ನಿರ್ವಹಣೆಗೆ ಹೆಕ್ಸಾಕೊನಝೋಲ್ 1 ಮಿ.ಲೀ + ಎನ್.ಪಿ.ಕೆ. 19:19:19 @ 10ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ. ಅಗತ್ಯವಿದ್ದಲ್ಲಿ ಇದೇ ಸಿಂಪರಣೆಯನ್ನು 15 ದಿವಸದ ನಂತರ ಮತ್ತೊಮ್ಮೆ ಸಿಂಪಡಣೆ ಮಾಡಬೇಕು.