ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀಟ್ ಪರೀಕ್ಷೆಯ ಅವ್ಯವಹಾರ; ಪಾರದರ್ಶಕ ತನಿಖೆಯಾಗಲಿ’ 

Published 9 ಜೂನ್ 2024, 16:27 IST
Last Updated 9 ಜೂನ್ 2024, 16:27 IST
ಅಕ್ಷರ ಗಾತ್ರ

ರಾಯಚೂರು: ವೈದ್ಯಕೀಯ ಶಿಕ್ಷಣ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಸಿರುವ ನೀಟ್ (ಯುಜಿ) ಪರೀಕ್ಷೆಯ ಫಲಿತಾಂಶದಲ್ಲಿ ಅಕ್ರಮ ನಡೆದಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಕುರಿತು ಪಾರದರ್ಶಕವಾಗಿ ತನಿಖೆ ನಡೆಸಬೇಕು ಎಂದು ಭಾರತೀಯ ವಿದ್ಯಾರ್ಥಿ ಪರಿಷತ್( ಎಸ್ಎಫ್ಐ) ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ವೀರಾಪೂರು ಒತ್ತಾಯಿಸಿದ್ದಾರೆ,

ಜೂನ್ 4 ರಂದು ನೀಟ್–ಯು ಜಿ ಪರೀಕ್ಷೆಯ ಫಲಿತಾಂಶಗಳು ಪ್ರಕಟವಾದ ನಂತರ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ( ಎನ್ ಟಿಎ) ನಡವಳಿಕೆಯ ಬಗ್ಗೆ ಸಾಕಷ್ಟು ಪ್ರಶ್ನೆ ಮಾಡಲಾಗುತ್ತಿದೆ. ಎಂಬಿಬಿಎಸ್, ಬಿಡಿಎಸ್  ಪದವಿ ಹಂತದ ಪ್ರವೇಶ ಪರೀಕ್ಷೆಯಲ್ಲಿ ಒಟ್ಟು ಅಂಕಗಳು 720. ಪ್ರತಿ ಸರಿಯಾದ ಉತ್ತರಕ್ಕೆ 4 ಅಂಕಗಳನ್ನು ನೀಡಲಾಗುತ್ತದೆ. ಆದರೆ ಪ್ರತಿ ತಪ್ಪು ಉತ್ತರಕ್ಕೆ 1 ಅಂಕವನ್ನು ಕಡಿತಗೊಳಿಸಲಾಗುತ್ತಿದ್ದು ಆದರೆ ಉತ್ತರಿಸದ ಪ್ರಶ್ನೆಗಳನ್ನು ಗುರುತಿಸಿಲ್ಲ. ಆ ಸಂದರ್ಭದಲ್ಲಿ, ಗಣಿತದ ಪ್ರಕಾರ 719 ಮತ್ತು 718 ನಂತಹ ಅಂಕಗಳನ್ನು ಪಡೆಯಲು ಸಾಧ್ಯವಿಲ್ಲ. ಆದರೆ ಅಂತಹ ಪ್ರಕರಣಗಳು ಬಂದಿರುವ ಫಲಿತಾಂಶಗಳಲ್ಲಿ ಕಂಡುಬರುತ್ತಿದೆ. ಈ ವರ್ಷದ ಫಲಿತಾಂಶ ಗ್ರೇಸ್ ಮಾರ್ಕಿಂಗ್‌ಗಾಗಿ ಎಂದು ಎನ್‌ಟಿಎ ಪ್ರಾಸಂಗಿಕವಾಗಿ ಹೇಳಿಕೆಯಲ್ಲಿ ತಿಳಿಸಿದೆ.  ಆದರೆ ಈ ವರ್ಷ ಪರೀಕ್ಷೆಗೆ ಮುನ್ನ ಎನ್‌ಟಿಎ ಪ್ರಕಟಿಸಿದ ಮಾರ್ಗಸೂಚಿಗಳಲ್ಲಿ ಎಲ್ಲಿಯೂ ಈ ಗ್ರೇಸ್ ಮಾರ್ಕಿಂಗ್ ಯೋಜನೆಯ ಬಗ್ಗೆ ಉಲ್ಲೇಖಸಿಲ್ಲ ಎಂದು ದೂರಿದರು. 

ಎನ್‌ಟಿಎ ಜಾರಿಗೆ ಬಂದಾಗಿನಿಂದ ಅವ್ಯವಹಾರಗಳು ನಡೆಯುತ್ತಿದೆ. ಈ ಸಂಸ್ಥೆಯು ನಡೆಸುವ ಪರೀಕ್ಷೆ ಅಸಮರ್ಥವಾಗಿದೆ ಎಂದು ಮತ್ತೊಮ್ಮೆ ಸಾಬೀತಾಗಿದೆ. ಈ ಬಗ್ಗೆ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ಅಭ್ಯಾರ್ಥಿಗಳ ಪರವಾಗಿ ನಡೆಯುತ್ತಿರುವ ಹೋರಾಟಕ್ಕೆ ಎಸ್ಎಫ್ಐ ಬೆಂಬಲಿಸಲಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT