ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೇತಾಜಿ ವೈಚಾರಿಕ ಹೋರಾಟದಿಂದ ಸ್ಫೂರ್ತಿ’

Last Updated 23 ಜನವರಿ 2019, 13:30 IST
ಅಕ್ಷರ ಗಾತ್ರ

ರಾಯಚೂರು: ವಿದ್ಯಾರ್ಥಿ-ಯುವಜನರಿಗೆ ನೇತಾಜಿಯವರ ವಿಚಾರ ಹೋರಾಟ ಸ್ಪೂರ್ತಿಯಾಗಿದೆ ಎಂದು ಎಐಡಿವೈಒ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಉದ್ಬಾಳ್ ಹೇಳಿದರು.

ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ), ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಮತ್ತು ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆಗಳ (ಎಐಎಂಎಸ್‌ಎಸ್‌) ಜಿಲ್ಲಾ ಸಮಿತಿಯಿಂದ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ 122ನೇ ಜನ್ಮ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನೇತಾಜಿ ಆಗರ್ಭ ಶ್ರೀಮಂತರ ಮನೆಯಲ್ಲಿ ಜನಿಸಿದರು. ಆದರೆ ಜನಸಾಮಾನ್ಯರೊಂದಿಒಗೆ ಬೆರೆತು ಬದುಕು ಸಾಗಿಸಿದರು. ಅವರ ಕಷ್ಟಗಳನ್ನು ಅರಿತು ಅವರಿಗಾಗಿ ಮನ ಮಿಡಿದರು. ಆಗಿನ ಕಾಲದಲ್ಲಿ ಸಾಮಾನ್ಯವಾಗಿದ್ದ ಕಾಲರಾ, ಪ್ಲೇಗ್ ಮುಂತಾದ ಸಾಂಕ್ರಾಮಿಕ ರೋಗಗಳ ವಿರುದ್ಧ ಸೆಣಸಿ ತಮ್ಮ ಜೀವನವನ್ನು ಪಣಕಿಟ್ಟು ಕೆಲಸ ನಿರ್ವಹಿಸಿದರು ಎಂದರು.

ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ವಿರುದ್ಧ ರಾಜಿರಹಿತ ಹೋರಾಟದ ಮೂಲಕ ಮಹಾನಾಯಕರಾಗಿ ಹೊರಹೊಮ್ಮಿದರು. ಅವರ ಕನಸಿನ ಸಮಾಜ ಇನ್ನೂ ಬರದೇ ಇರುವುದರಿಂದ ನಮ್ಮ ವಿದ್ಯಾರ್ಥಿ-ಯುವಜನರು ಅವರ ಕನಸಿನ ಸಮಾಜದ ನಿರ್ಮಾಣಕ್ಕಾಗಿ ಪಣತೊಡಬೇಕೆಂದು ಎಂದು ತಿಳಿಸಿದರು.

ರಾಜಕೀಯ ಎಂದರೆ ಜನರು ಅಸಹ್ಯ ಪಡುವಂತಾಗಿದೆ. ರೈತರು ಸಾಯುತ್ತಿದ್ದಾರೆ. ಬರಗಾಲ ಬಿದ್ದಿದೆ. ಯುವಕರು ಕೆಲಸವಿಲ್ಲದೇ ಬಸವಳಿದಿದ್ದಾರೆ. ಮಹಿಳೆಯರು ಇಂದು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ನಮ್ಮ ಜನಪ್ರತಿನಿಧಿಗಳು ಇವ್ಯಾವುಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸ್ವಾರ್ಥ, ಭ್ರಷ್ಟ, ಅಧಿಕಾರದ ರೆಸಾರ್ಟ್ ರಾಜಕೀಯದಲ್ಲಿ ಮುಳುಗಿದ್ದಾರೆ. ಆನರು ಇವರಿಗೆ ತಕ್ಕ ಪಾಠ ಕಲಿಸಬೇಕು. ಇಂತಹರ ವಿರುದ್ಧ ಬಲಿಷ್ಟ ಹೋರಾಟ ಬೇಕಾಗಿದೆ. ಅದಕ್ಕಾಗಿ ನೇತಾಜಿಯವರ ವಿಚಾರಗಳು ಎಲ್ಲರಿಗೂ ಸ್ಪೂರ್ತಿಯಾಗಿವೆ ಎಂದು ಹೇಳಿದರು.

ಎಐಡಿಎಸ್‌ಒ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಚೀಕಲಪರ್ವಿ ಅಧ್ಯಕ್ಷತೆ ವಹಿಸಿದ್ದರು. ಎಐಎಂಎಸ್‌ಎಸ್‌ನ ಸಂಘಟನಾಕಾರ ಉಮಾಮಹೇಶ್ವರಿ ವಂದಿಸಿದರು. ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಚನ್ನಬಸವ ಜಾನೇಕಲ್, ಸಂಘಟನೆಗಳ ಸದಸ್ಯರಾದ ಮಲ್ಲನಗೌಡ, ಆಂಜನೇಯ ಬಿ.ಗಣೇಕಲ್, ಯಾಸೀನ್, ಫೀರ್‌ಸಾಬ್, ಕಾರ್ತಿಕ್, ಮಲ್ಲಿಕಾರ್ಜನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT