ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಮತದಾರರ ಸಂಭ್ರಮ

Last Updated 23 ಏಪ್ರಿಲ್ 2019, 13:36 IST
ಅಕ್ಷರ ಗಾತ್ರ

ರಾಯಚೂರು: ಲೋಕಸಭಾ ಚುನಾವಣೆಗೆ ರಾಯಚೂರು ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿರುವ 18 ರಿಂದ 19 ವರ್ಷ ತುಂಬಿದ ಯುವ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಿ ಸಂಭ್ರಮಪಟ್ಟರು.

ಕ್ಷೇತ್ರದಲ್ಲಿ 40,120 ಯುವ ಮತದಾರು ಹೆಸರು ನೋಂದಣಿ ಮಾಡಿಕೊಂಡಿದ್ದು, ಮೊದಲ ಬಾರಿಗೆ ಮತ ಚಲಾಯಿಸಿ ಯುವ ಮತದಾರರಿಗೆಲ್ಲ ಮತಗಟ್ಟೆಗಳಲ್ಲಿ ಸಸಿ ವಿತರಣೆ ಮಾಡಲಾಯಿತು. ಮತ ಚಲಾಯಿಸಿದ ಯುವ ಮತದಾರರು ಸಸಿಗಳೊಂದಿಗೆ ಮತಗಟ್ಟೆಯಿಂದ ಸಂತಸದಿಂದ ತೆರಳುವುದು ಕಂಡುಬಂತು.

ಸಖಿ ಮತಗಟ್ಟೆ ಆಕರ್ಷಣೆ:ನಗರದಲ್ಲಿ ಸ್ಥಾಪನೆ ಮಾಡಿದ್ದ ಸಖಿ ಮತಗಟ್ಟೆಗಳಲ್ಲಿ ಬಲೂನ್‌ ಹಾಗೂ ಬ್ಯಾನರ್‌ ಅಳವಡಿಸಿ ಆಕರ್ಷಣೆ ಮೂಡಿಸುವಂತೆ ಸಿಂಗಾರ ಮಾಡಲಾಗಿತ್ತು. ಸಖಿ ಮತಗಟ್ಟೆಗಳಲ್ಲಿ ಮತ ಚಲಾಯಿಸಲು ಬಂದ ಮತದಾರರು ಮತಗಟ್ಟೆಯ ವ್ಯವಸ್ಥೆಗೆ ಸಂತಸ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಹತ್ತಿರದಲ್ಲಿರುವ ಸಖಿ ಮತಗಟ್ಟೆಯಲ್ಲಿ ಮತದಾರರೊಂದಿಗೆ ಬರುವ ಮಕ್ಕಳನ್ನು ಆಡಿಸಲು ಅಂಗನವಾಡಿ ಕೇಂದ್ರದ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಮಕ್ಕಳಿಗಾಗಿ ಆಟದ ಸಾಮಗ್ರಿಗಳನ್ನು ಇಡಲಾಗಿತ್ತು.

ಗಾಲಿ ಖುರ್ಚಿ:ಅಂಗವಿಕಲರಿಗೆ ಗಾಲಿ ಕುರ್ಚಿಯಲ್ಲಿ ಕೂಡಿಸಿಕೊಂಡು ಹೋಗಿ ಮತ ಚಲಾಯಿಸಲು ಮತಗಟ್ಟೆಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಈ ಸೌಲಭ್ಯ ಬಳಸಿಕೊಂಡು ಅಂಗವಿಕಲರು ಮತ ಚಲಾಯಿಸಿ ಚುನಾವಣಾ ಆಯೋಗದ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮತಗಟ್ಟೆಗಳ ಬದಲು:ಮತದಾರರು ಕಳೆದ ಚುನಾವಣೆಯ ಸಂದರ್ಭದಲ್ಲಿ ಒಂದು ಮತಗಟ್ಟೆಯಲ್ಲಿ ಮತ ಚಲಾಯಿಸಿದರೆ, ಈ ಬಾರಿ ಬೇರೊಂದು ಮತಗಟ್ಟೆಯಲ್ಲಿ ಮತ ಚಲಾಯಿಸುವಂತಾಯಿತು. ಮತಗಟ್ಟೆಗಳು ಬದಲಾಗಿದ್ದರಿಂದ ಮತದಾರರು ಮತಗಟ್ಟೆಯನ್ನು ಹುಡುಕಲು ಸಾಹಸ ಮಾಡುವಂತಾಯಿತು.

ಕಳೆದ ಚುನಾವಣೆಯಲ್ಲಿ ಮತ ಚಲಾಯಿಸಿ ಮತಗಟ್ಟೆಗೆ ಹೋದ ಮತದಾರರಿಗೆ ಮತಗಟ್ಟೆಯಲ್ಲಿ ಹೆಸರು ಇಲ್ಲದಿರುವುದರಿಂದ ಮತಗಟ್ಟೆ ಹುಡುಕಿಕೊಂಡು ಹೋಗಿ ಮತ ಚಲಾಯಿಸಿದರು. ನಗರದಲ್ಲಿ ಯಾಉವದೇ ಗೊಂದಲವಿಲ್ಲ ಬಹುತೇಕ ಶಾಂತಿಯುತವಾಗಿ ಮತದಾನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT