‘ಮಂತ್ರಾಲಯದಲ್ಲಿ ಪ್ರವಾಹ ಭೀತಿ ಇಲ್ಲ’

7

‘ಮಂತ್ರಾಲಯದಲ್ಲಿ ಪ್ರವಾಹ ಭೀತಿ ಇಲ್ಲ’

Published:
Updated:

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಯಾವುದೇ ಪ್ರವಾಹ ಭೀತಿ ಎದುರಾಗಿಲ್ಲ. ಕೆಲವು ದುಷ್ಕರ್ಮಿಗಳು ಅಪಪ್ರಚಾರ ಮಾಡಿ ವದಂತಿ ಹರಡುತ್ತಿದ್ದಾರೆ. ಭಕ್ತರು ಇದನ್ನು ನಂಬಬಾರದು ಎಂದು ಮಠದ ಪ್ರಕಟಣೆ ತಿಳಿಸಿದೆ.

ಮಠದ ಪ್ರಾಕಾರದಲ್ಲಿ ನೀರು ಬಂದಿದೆ ಎನ್ನುವುದು ಸುಳ್ಳು ಸುದ್ದಿ. ತುಂಗಭದ್ರಾ ಅಣೆಕಟ್ಟಿನಿಂದ ನಿರಂತರ ನೀರು ಹರಿಸಲಾಗುತ್ತಿದ್ದರೂ, ಹೊರಹರಿವು ಅಪಾಯಕಾರಿ ಮಟ್ಟದಲ್ಲಿಲ್ಲ. ಪ್ರತಿ ವರ್ಷದಂತೆ ಆಗಸ್ಟ್‌ 25 ರಿಂದ 31 ರ ವರೆಗೂ ಮಂತ್ರಾಲಯದಲ್ಲಿ ರಾಯರ ಆರಾಧನಾ ಮಹೋತ್ಸವವು ಭಕ್ತಿ ಭಾವದಿಂದ ನಡೆಯಲಿದೆ.

ಭಕ್ತರು ತುಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡುವುದಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ದೇಶ, ವಿದೇಶಗಳಿಂದ ಬರುವ ಭಕ್ತರು ರಾಯರ ದರ್ಶನ ಪಡೆಯುವುದಕ್ಕೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !