ಹೋರಾಟ ಹತ್ತಿಕ್ಕಲು ಬಂಧನಕ್ಕೆ ಸಿದ್ಧತೆ: ಆರ್.ಮಾನಸಯ್ಯ

7

ಹೋರಾಟ ಹತ್ತಿಕ್ಕಲು ಬಂಧನಕ್ಕೆ ಸಿದ್ಧತೆ: ಆರ್.ಮಾನಸಯ್ಯ

Published:
Updated:
Deccan Herald

ರಾಯಚೂರು: ಗುತ್ತಿಗೆ ರದ್ದುಪಡಿಸಿ, ಬಾಕಿ ವೇತನ ಪಾವತಿಸಲು ಒತ್ತಾಯಿಸಿ ಕಳೆದ 36 ದಿನಗಳಿಂದ ಧರಣಿ ನಡೆಸುತ್ತಿದ್ದರೂ, ಸ್ಪಂದಿಸದ ಸರ್ಕಾರ ಹೋರಾಟಗಾರರನ್ನು ಬಂಧಿಸಲು ಸಿದ್ಧತೆ ಮಾಡಿಕೊಂಡಿರುವ ಮಾಹಿತಿಯಿದ್ದು, ಈ ಮೂಲಕ ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆದಿದೆ ಎಂದು ಟಿಯುಸಿಐ ಸಂಯೋಜಿತ ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘದ ಅಧ್ಯಕ್ಷ ಆರ್.ಮಾನಸಯ್ಯ ಆರೋಪಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋರಾಟಗಾರರನ್ನು ಬಂಧಿಸಿದರೂ, ಹೋರಾಟ ನಿಲ್ಲಲ್ಲ. ನಾಳೆ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶನ ನಡೆಯಲಿದೆ ಎಂದರು.

ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರೆ ಗುತ್ತಿಗೆ ಪದ್ದತಿ ರದ್ದುಪಡಿಸುವಾಗಿ ಹೇಳಿದ್ದರು. ಆದರೆ, ಅದು ಈಡೇರಿಲ್ಲ. ಕಾರ್ಮಿಕರ ಹಾಗೂ ರೈತರ ಸಮಸ್ಯೆಗಳನ್ನು ಯಾವುದೇ ಸರ್ಕಾರ ಬಗೆಹರಿಸಿಲ್ಲ. ಈ ಸಮ್ಮಿಶ್ರ ಸರ್ಕಾರವೂ ಅದೇ ಹಾದಿ ಹಿಡಿದಿದೆ ಎಂದು ದೂರಿದರು.

ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಸಮಯ ಇಲ್ಲವಾಗಿದೆ. ಅಧಿಕಾರದಲ್ಲಿರುವವರ ಫ್ಯಾಸಿಸ್ಟ್ ಭಾವನೆಯಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವಾತಂತ್ರ್ಯೋತ್ಸವ ದಿನಾಚರಣೆ ನಾಳೆ ಎಲ್ಲರಿಗೆ ಸಂಭ್ರಮದ ದಿನವಾದರೆ, ಕಾರ್ಮಿಕರಿಗೆ ಕರಾಳ ದಿನವಾಗಿದೆ. ಸಮಸ್ಯೆ ಬಗೆಹರಿಸದೇ ಸುಳ್ಳು ಹೇಳುವವರು ರಾಷ್ಟ್ರಧ್ವಜ ಮುಟ್ಟಬಾರದು ಎಂದು ಒತ್ತಾಯಿಸಿದರು.

ಕಾರ್ಮಿಕ ಮುಖಂಡರು ಹಾಗೂ ಕಾರ್ಮಿಕರು ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !