ಭಾನುವಾರ, ಮಾರ್ಚ್ 26, 2023
24 °C

ರೈತ ಸಮಾವೇಶ ಯಶಸ್ವಿಗೊಳಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರು: ‘ಇಲ್ಲಿನ ಶಾದಿಮಹಲ್‍ ಮೈದಾನದಲ್ಲಿ ನ. 8ರಂದು ರೈತ ಸಮಾವೇಶ ಆಯೋಜಿಸಲಾಗಿದೆ. ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು’ ಎಂದು ಸಮಗ್ರ ನೀರಾವರಿ ಹಕ್ಕು ರಕ್ಷಣಾ ವೇದಿಕೆ ಅಧ್ಯಕ್ಷ ಆರ್. ಮಾನಸಯ್ಯ ಮನವಿ ಮಾಡಿದರು.

‘ರೈತರ ಜೀವನಾಡಿ ನಾರಾಯಣಪುರ ಬಲದಂಡೆ ನಾಲೆ ಅಧುನೀಕರಣ, ರಾಂಪೂರ ಏತ ನೀರಾವರಿ, ನಂದವಾಡಗಿ ಏತ ನೀರಾವರಿ, 9 (ಎ) ವಿತರಣಾ ನಾಲೆ ಸೇರಿ ಇತರ ಯೋಜನೆಗಳ ಅನುಷ್ಠಾನದಲ್ಲಿ ನಡೆದಿರುವ ₹4,500 ಕೋಟಿ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ನಾಲ್ಕು ತಿಂಗಳಿಂದ ಹೋರಾಟ ನಡೆಸುತ್ತ ಬಂದಿದ್ದೇವೆ. ಸಮಾವೇಶದ ಮೂಲಕ ಬಹಿರಂಗ ಸವಾಲು ಹಾಕುತ್ತಿದ್ದೇವೆ’ ಎಂದರು. ‘ಕೃಷ್ಣಾ ಭಾಗ್ಯ ಜಲ ನಿಗಮದಿಂದ ರಾಯಚೂರು ಜಿಲ್ಲೆ ಸಮಗ್ರ ನೀರಾವರಿಗೆ ಒಳಪಡಬೇಕಿತ್ತು. ಆದರೆ, ರಾಜಕೀಯ ಕೈಗೊಂಬೆ ಆಗಿ ಸೇವೆ ಸಲ್ಲಿಸುತ್ತಿರುವ ಅಧಿಕಾ ರಿಗಳು ಗುತ್ತಿಗೆ ದಾರರ ಜೇಬು ಭರ್ತಿ ಮಾಡುವಂಥ ನೀಲ ನಕ್ಷೆ ಸಿದ್ಧಪಡಿಸಿ ಸರ್ಕಾರದ ಬೊಕ್ಕಸ ಕೊಳ್ಳೆ ಹೊಡೆದಿದ್ದಾರೆ. ಹೋರಾಟವನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯದಿಂದ ಕಾಣುತ್ತಿದ್ದಾರೆ. ಆದ್ದರಿಂದ ಸಮಾವೇಶದ ಮೂಲಕ ಹೋರಾಟವನ್ನು ಜನಾಂದೋಲನವಾಗಿ ಮಾರ್ಪಡಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು. ‘ಕೇಂ ದ್ರ ಸರ್ಕಾರ ತಿದ್ದುಪಡಿ ಮಾಡಿ ರುವ ಮೂರು ಕಾಯ್ದೆ ಗಳನ್ನು ವಾಪಸ್ ಪಡೆಯ ಬೇಕು ಎಂದರು.

ನೀರಾವರಿ ಸೌಲಭ್ಯ, ಕಾಲುವೆ ಅಧುನೀಕರಣದ ಹೆಸರಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಬೇಕು. ಅರ್ಹತೆ ಹೊಂದಿರದ ಗುತ್ತಿಗೆದಾರ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಮಾವೇಶದಲ್ಲಿ ಒತ್ತಾಯಿಸಲಾಗುವುದು’ ಎಂದು ಹೇಳಿದರು.

ವಿವಿಧ ಸಂಘಟನೆಗಳ ಮುಖಂಡರಾದ ಲಿಂಗಪ್ಪ ಪರಂಗಿ, ಚಿನ್ನಪ್ಪ ಕೊಟ್ರಿಕಿ, ಅನಿಲಕುಮಾರ, ಶಾಂತಕುಮಾರ ಹಾಗೂ ಅಮರೇಗೌಡ ನಾಯಕ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.