ಮಂಗಳವಾರ, ಡಿಸೆಂಬರ್ 1, 2020
21 °C
ಅಂಗನವಾಡಿ ಫೆಡರೇಶನ್‍ನಿಂದ ಪ್ರತಿಭಟನಾ ಧರಣಿ

ಸಿಡಿಪಿಒ ಮೇಲೆ ಹಲ್ಲೆ: ಬಂಧನಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ಸಿಂಧನೂರಿನ ಸಿಡಿಪಿಒ ಟಿ.ಯೋಗಿತಾಬಾಯಿ ಅವರ ಮೇಲೆ ಮಾಡಿದ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಶನ್ ತಾಲ್ಲೂಕು ಘಟಕದಿಂದ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿತು.

ಎಐಟಿಯುಸಿ ಅಧ್ಯಕ್ಷ ಬಾಷುಮಿಯಾ ಮಾತನಾಡಿ, ಶ್ರೀದೇವಿ ಶ್ರೀನಿವಾಸ ಅವರ ವರ್ತನೆ ಕುರಿತು ಈಗಾಗಲೇ ತಹಶೀಲ್ದಾರ್‌ ಅವರು, ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ. ಕೂಡಲೇ  ಶ್ರೀದೇವಿ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ, ಬಂಧಿಸಬೇಕು. ಜೊತೆಗೆ ಸಿಡಿಪಿಒ ಯೋಗಿತಾಬಾಯಿ ಅವರಿಗೆ  ರಕ್ಷಣೆ ನೀಡಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಹಂತ ಹಂತವಾಗಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಶಿರಸ್ತೇದಾರ್ ಅಂಬಾದಾಸ್ ಮನವಿ ಪತ್ರ ಸ್ವೀಕರಿಸಿದರು.

ಉಪನ್ಯಾಸಕ ಚಂದ್ರಶೇಖರ ಗೊರಬಾಳ, ಸಮುದಾಯ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ದಲಿತ ಸಂಘಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ನಂಜಲದಿನ್ನಿ ಮಾತನಾಡಿದರು.

ಫೆಡರೇಶನ್ ರಾಜ್ಯ ಸಮಿತಿ ಸದಸ್ಯರಾದ ತಿಪ್ಪಯ್ಯಶೆಟ್ಟಿ, ಸಿದ್ರಾಮೇಶಸ್ವಾಮಿ ಮಾನ್ವಿ, ಅಧ್ಯಕ್ಷೆ ಗಿರಿಜಮ್ಮ, ಕಾರ್ಯದರ್ಶಿ ಆದಿಲಕ್ಷ್ಮಿ, ಖಜಾಂಚಿ ಲಕ್ಷ್ಮಿ, ಸದಸ್ಯರಾದ ಪ್ರಭಾವತಿ, ಶಾಂತಮ್ಮ, ತ್ರಿವೇಣಿ, ಸುರೇಖಾ, ಪಾರ್ವತಿ, ಸುಭದ್ರಾ, ಯಮನಮ್ಮ, ಸರಸ್ವತಿ, ಸುಧಾ, ಸುಲೋಚನಾ, ಸಾವತ್ರಿ, ರತ್ನಮ್ಮ, ನಾಗವೇಣಿ, ನಾಗರತ್ನ, ಗೌರಮ್ಮ, ಲಕ್ಷ್ಮಿದೇವಿ, ಅರಳಮ್ಮ, ಆರೋಗ್ಯಮ್ಮ, ಸಹಾಯ ಮೇರಿ, ಸುಧಾ, ಮೌಲಾಬಿ, ಮಲ್ಲಮ್ಮ, ಕಾಂತಾಯಮ್ಮ, ಹುಲಿಗೆಮ್ಮ, ಇಂದ್ರಮ್ಮ, ಈರಮ್ಮ ಹಾಗೂ ಅಂಗನ ವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಶನ್ ತಾಲ್ಲೂಕು ಘಟಕದ ಪ್ರಮುಖರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.