ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಉದ್ಯಾನಕ್ಕೆ ಮೂಲಸೌಕರ್ಯ ಕಲ್ಪಿಸಲು ಆಗ್ರಹ

Last Updated 1 ನವೆಂಬರ್ 2021, 7:44 IST
ಅಕ್ಷರ ಗಾತ್ರ

ರಾಯಚೂರು: ಇಲ್ಲಿನ ವಾರ್ಡ್ ನಂಬರ್ 2 ರ ವ್ಯಾಪ್ತಿಯ ಅಮರೇಶ್ವರ ಕಾಲೊನಿಯ ಬಳಿಯ ಉದ್ಯಾನ ನಿರ್ವಹಣೆಯ ಕೊರತೆಯಿಂದಾಗಿ ಅಧೋಗತಿಯ ಸ್ಥಿತಿಗೆ ತಲುಪಿದೆ.

ನಗದಲ್ಲಿ ಉದ್ಯಾನಗಳ ಕೊರತೆ ಒಂದೆಡೆಯಾದರೆ ಇದ್ದ ಉದ್ಯಾನಗಳ ರಕ್ಷಣೆ, ನಿರ್ವಹಣೆ ನಗರಸಭೆಯ ಆಡಳಿತ ಮಂಡಳಿಯಿಂದ ಸರಿಯಾಗಿ ಆಗದ ಕಾರಣ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಆಶಾಪುರ ರಸ್ತೆಯ ವೆಂಕಟೇಶ್ವರ ಕಾಲೋನಿ ಬಳಿಯ ಉದ್ಯಾನದಲ್ಲಿ ಸಮರ್ಪಕ ತಡೆಗೋಡೆಯಿಲ್ಲದ ಕಾರಣ ಹಂದಿ, ನಾಯಿಗಳ ಹಾವಳಿ ಹೆಚ್ಚಾಗಿದೆ. ಸುತ್ತಮುತ್ತಲಿನ ಕಸ ವಿಲೇವಾರಿ ಆಗದ ಕಾರಣ
ಅಸ್ವಚ್ಛತೆಗೆ ಕಾರಣವಾಗಿದೆ. ಉದ್ಯಾನದಲ್ಲಿ ಜನರಿಗೆ ಕೂರಲು ಸಿಮೆಂಟ್ ಗಳ ಸೀಟು ಅಳವಡಿಸಲಾಗಿದೆ ಆದರೆ ಅದರ ಕಾಲುಗಳು ನೆಲಕಚ್ಚಿದ್ದರಿಂದ ಇದ್ದರೂ ಇಲ್ಲದಂತಾಗಿದೆ. ಸಮರ್ಪಕ ನಿರ್ವಾಹಣೆಯಾಗದ ಕಾರಣ ರಾತ್ರಿ ವೇಳೆ ಇದು ಮದ್ಯಪ್ರಿಯರ ಅಡ್ಡವಾಗಿ ಮಾರ್ಪಡುತ್ತದೆ. ಹಲವು ಕಡೆ ಉದ್ಯಾನಗಳ ಸ್ಥಿತಿ ಇದೇ ಆಗಿದೆ.

ಬಿಸಿಲುನಾಡು ಎಂದು ಖ್ಯಾತಿ ಪಡೆದ ರಾಯಚೂರಿನಲ್ಲಿ ಬೇಸಿಗೆಯಲ್ಲಿ ಆರಾಮವಾಗಿ ಕೂರಬೇಕಾದರೆ ಸೂಕ್ತ ಸಾರ್ವಜನಿಕ ಪ್ರದೇಶಗಳಿಲ್ಲ. ಉದ್ಯಾನವನಗಳು ಪಾಳುಬಿದ್ದ ಬಿದ್ದ ಹೊಲಗಳಂತಾಗಿವೆ. ಸುತ್ತಲೂ ಜಾಲಿಗಿಡಗಳು, ಕಸ, ತ್ಯಾಜ್ಯ ಎಸೆಯುವುದರಿಂದ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ನಗರಸಭೆ ಆಡಳಿತ ಮಂಡಳಿ ಲಕ್ಷಾಂತರ ರೂಪಾಯಿ ಅಭಿವೃದ್ಧಿ ಕಾರ್ಯಗಳಿಗೆ ವ್ಯಯಿಸಿದರೂ ಉದ್ಯಾನವನಗಳ ಅಭಿವೃದ್ಧಿಗೆ ಸಮರ್ಪಕ ಅನುದಾನ ನೀಡದೇ ಸಿಬ್ಬಂದಿಯಿಂದ ನಿರ್ವಹಣೆ ಮಾಡಲು ಮುಂದಾಗುತ್ತಿಲ್ಲ.

ಉದ್ಯಾನಗಳಿಗೆ ವಿದ್ಯುತ್ ದ್ವೀಪ, ಸ್ವಚ್ಛತೆ ಕಲ್ಪಿಸಿ ಮೂಲಸೌಕರ್ಯ ಕಲ್ಪಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಉದ್ಯಾನ ನಿರ್ಮಾಣ ಮಾಡುವ ಉದ್ದೇಶವಾದರೂ ಯಾಕೆ ಮಾಡಬೇಕು. ಎಂದು ಸ್ಥಳೀಯ ನಿವಾಸಿಗಳ ಪ್ರಶ್ನೆಯಾಗಿದೆ.

‘ನಗರದ ಆಶಾಪುರ ರಸ್ತೆಯ ಉದ್ಯಾನ ಅವ್ಯವಸ್ಥೆಯಿಂದ ಕೂಡಿದೆ. ಕುರ್ಚಿಗಳು ಮುರಿದುಬಿದ್ದಿವೆ. ಹಂದಿಗಳು ನೇರವಾಗಿ ನುಗ್ಗುವಕಾರಣ ಕುರಲು ಆಗದಂತಾಗಿದೆ. ನಗರಸಭೆ ಆಡಳಿತ ಮಂಡಳಿ ಸ್ವಚ್ಛತೆ ಕಾಪಾಡಿ ಅನುಕೂಲ ಮಾಡಬೇಕು‘ ಎಂದು ಸ್ಥಳೀಯ ನಿವಾಸಿ ಅಜೀಜ್ ಜಾಗಿರ್ದಾರ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT