ಸೋಮವಾರ, ಸೆಪ್ಟೆಂಬರ್ 16, 2019
21 °C

ಸಿಬಿಎಸ್‌ಇ 10ನೇ ತರಗತಿ: ರೇಸ್‌ ಕಾನ್ಸೆಪ್ಟ್‌ ಶಾಲೆ ಪ್ರತಿಶತ ಸಾಧನೆ

Published:
Updated:
Prajavani

ರಾಯಚೂರು: ನಗರದ ರೇಸ್‌ ಅಕಾಡೆಮಿ ಆಫ್‌ ಕ್ರಿಯೇಟಿವ್‌ ಎಡ್ಯುಕೇಷನ್‌ (ರೇಸ್‌) ಸಂಸ್ಥೆಯ ರೇಸ್‌ ಕಾನ್ಸೆಪ್ಟ್‌ ಶಾಲೆಯು ಈಚೆಗೆ ಪ್ರಕಟವಾದ ಸಿಬಿಎಸ್‌ಇ 10ನೇ ತರಗತಿ ಫಲಿತಾಂಶದಲ್ಲಿ ನೂರಕ್ಕೆ ನೂರರಷ್ಟು ಸಾಧನೆ ಮಾಡಿದೆ.

ಒಟ್ಟು 93 ವಿದ್ಯಾರ್ಥಿಗಳಲ್ಲಿ 55 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌, 37 ವಿದ್ಯಾರ್ಥಿಗಳು ಪ್ರಥಮ ದರ್ಜೆ, ಒಬ್ಬ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ಆರ್‌. ಸೋಹನ್‌ ಶೇ 97.4 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ, ಎಂ.ಆರ್‌.ಕವನಾ ಶೇ 96.6 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ ವಿಶ್ವಾಸ ಜಿ.ಸಿ. ಶೇ 96.4 ಅಂಕಗಳನ್ನು ಪಡೆದು ತೃತೀಯ ಸ್ಥಾನದಲ್ಲಿದ್ದಾರೆ. ಬಿ.ದೀಪ್ತಿ ಮತ್ತು ಎಂ.ಬಿ. ಭಾಗ್ಯಲಕ್ಷ್ಮೀ ಅವರು ಶೇ 95.6 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

ವಿದ್ಯಾರ್ಥಿಗಳ ಸಾಧನೆಯನ್ನು ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಶಿಕ್ಷಕೇತರರು ಅಭಿನಂದಿಸಿದ್ದಾರೆ.

 

 

Post Comments (+)