ಲಿಂಗಸುಗೂರು: ‘ಫೆಬ್ರುವರಿಯಲ್ಲಿ ನಡೆಯುವ ರಾಯಚೂರು ಜಿಲ್ಲಾ ಉತ್ಸವದ ಯಶಸ್ಸಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ತಹಶೀಲ್ದಾರ್ ಸತ್ಯಮ್ಮ ಹೇಳಿದರು.

ಪಟ್ಟಣದ ತಾ.ಪಂ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಉತ್ಸವದ ಪ್ರಯುಕ್ತ ನಡೆದ ಸಂಘ-ಸಂಸ್ಥೆ, ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

‘ಬಹಳ ವರ್ಷಗಳ ನಂತರ ಜಿಲ್ಲಾ ಉತ್ಸವ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಉತ್ಸವದಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಭಾಗವಹಿಸಬೇಕು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹಲವು ಸಮಿತಿಗಳನ್ನು ರಚನೆ ಮಾಡಿ, ಜವಾಬ್ದಾರಿ ವಹಿಸಲಾಗಿದೆ. ಉತ್ಸವದ ಬಗ್ಗೆ ಜಿಲ್ಲೆಯಾ ದ್ಯಂತ ಜಾಗೃತಿ ಮೂಡಿಸಲು ಜ್ಯೋತಿ ರಥಯಾತ್ರೆ ಕೈಗೊಳ್ಳಲಾಗುತ್ತಿದೆ. ಇದು ತಾಲ್ಲೂಕಿಗೆ ಆಗಮಿಸಲಿದೆ’ ಎಂದರು.

‘ಉತ್ಸವದಲ್ಲಿ ಭಾಗಿಯಾಗಲು ಅಂಗವಿಕಲರಿಗೆ ಬಸ್ ನಿಲ್ದಾಣದಿಂದ ಸಮಾರಂಭದ ಸ್ಥಳದವರೆಗೆ ವಾಹನದ ವ್ಯವಸ್ಥೆ ಕಲ್ಪಿಸಬೇಕು. ಅವರಿಗೆ ಅನುಕೂಲವಾಗುವಂಥ ಸೌಕರ್ಯಗಳನ್ನು ಒದಗಿಸಬೇಕು’ ಎಂದು ಅಂಗವಿಕಲರ ಸಂಘಟನೆಯ ಮುಖಂಡ ಸುರೇಶ ಭಂಡಾರಿ ಸಭೆಯ ಗಮನಕ್ಕೆ ತಂದರು.

‘ಜಿಲ್ಲಾ ಉತ್ಸವ ಕೇವಲ ರಾಯಚೂರಿಗೆ ಸೀಮಿತಗೊಳಿಸದೇ ಉಪವಿಭಾಗ ಹಾಗೂ ಇತರೆ ತಾಲ್ಲೂಕಿನಲ್ಲಿರುವ ಸರ್ಕಾರಿ ಕಚೇರಿಗಳಿಗೆ ಉತ್ಸವ ನಡೆಯುವ ಮೂರು ದಿನಗಳ ಕಾಲ ವಿದ್ಯುತ್ ದೀಪಾಂಲಕಾರ ಮಾಡಬೇಕು. ತಾಲ್ಲೂಕಿನಲ್ಲಿರುವ ಐತಿಹಾಸಿಕ ಸ್ಥಳಗಳ ಕುರಿತು ಉತ್ಸವದಲ್ಲಿ ಮಾಹಿತಿ ಒದಗಿಸಬೇಕು’ ಎಂದು ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಜ ಕೆಂಭಾವಿ ಹೇಳಿದರು.

ಜಿಲ್ಲಾ ಉತ್ಸವದ ಕುರಿತು ತಾಲ್ಲೂಕು ಹಾಗೂ ಗ್ರಾಮಮಟ್ಟದಲ್ಲಿ ಪ್ರಚಾರ ನಡೆಸಲು ಬ್ಯಾನರ್, ಪೋಸ್ಟರ್ಗಳನ್ನು ಅಳವಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಸಂಜೀವಪ್ಪ ಹುನಕುಂಟಿ ತಿಳಿಸಿದರು.

ಸಭೆಯಲ್ಲಿ ಎಲ್ಲಾ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ತಹಶೀಲ್ದಾರ್ ಸತ್ಯಮ್ಮ ಹೇಳಿದರು.

ಬಿಇಒ ಸುಜಾತ ಹೂನೂರು, ತಾ.ಪಂ ಸಹಾಯಕ ನಿರ್ದೇಶಕ ಪಂಪನಗೌಡ ಪಾಟೀಲ ಹಾಗೂ ತಾಲ್ಲೂಕುಮಟ್ಟದ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.