ರಾಯಚೂರಿನ ಆರು ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್

7

ರಾಯಚೂರಿನ ಆರು ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್

Published:
Updated:

ರಾಯಚೂರು: ಜಿಲ್ಲೆಯಲ್ಲಿ ನಡೆದ ಏಳು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಪೈಕಿ ಆರು ಕಡೆಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.

ಹೊಸದಾಗಿ ರಚನೆಯಾಗಿದ್ದ ಹಟ್ಟಿ ಪಟ್ಟಣ ಪಂಚಾಯ್ತಿಯ 13 ಸ್ಥಾನಗಳಲ್ಲಿ ಕಾಂಗ್ರೆಸ್ 8 ಸ್ಥಾನಗಳನ್ನು ಗೆದ್ದುಕೊಂಡಿದೆ. ಲಿಂಗಸುಗೂರು ಪುರಸಭೆಯಲ್ಲಿ 23 ಸ್ಥಾನಗಳ ಪೈಕಿ 11, ಮಾನ್ವಿ ಪುರಸಭೆಯ 27 ಸ್ಥಾನಗಳಲ್ಲಿ 13, ದೇವದುರ್ಗ ಪುರಸಭೆಯ 23 ಸ್ಥಾನಗಳಲ್ಲಿ 11, ಮುದಗಲ್ ಪುರಸಭೆ 23 ಸ್ಥಾನಗಳಲ್ಲಿ 15 ಹಾಗೂ ಸಿಂಧನೂರು ನಗರಸಭೆ 31 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದೆ.

ರಾಯಚೂರು ನಗರಸಭೆಯಲ್ಲಿ  ಬಿಜೆಪಿ 7, ಕಾಂಗ್ರೆಸ್ 5 ಹಾಗೂ ಜೆಡಿಎಸ್ 2 ಹಾಗೂ ಪಕ್ಷೇತರರು 6 ಮಂದಿ ಆಯ್ಕೆಯಾಗಿದ್ದಾರೆ.

ದೇವದುರ್ಗ ಬಿಜೆಪಿ ಶಾಸಕ ಶಿವನಗೌಡ ನಾಯಕ, ಮಾನ್ವಿಯ ಜೆಡಿಎಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಹಾಗೂ ಸಿಂಧನೂರಿನ ಸಚಿವ ವೆಂಕಟರಾವ್ ನಾಡಗೌಡ ಅವರಿಗೆ‌ ಭಾರಿ ಮುಖಭಂಗವಾದಂತಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !