ಭಾನುವಾರ, ಅಕ್ಟೋಬರ್ 25, 2020
26 °C

ಮಳೆ: ಬೆಳೆ ರಕ್ಷಣೆ ಸಾಹಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಟ್ಟಿ ಚಿನ್ನದಗಣಿ: ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಬೆಳೆದ ಬೆಳೆಗಳನ್ನು ಕಾಪಾಡಿಕೊಳ್ಳಲು ರೈತ ಸಮೂಹ ಹರ ಸಾಹಸ ಪಡುತ್ತಿದೆ.

ಗುರುಗುಂಟಾ ಹೋಬಳಿಯ ಕೋಠಾ, ರೋಡಲಬಂಡ, ಮಾಚನೂರು, ಬಂಡೆಭಾವಿ ಹಾಗೂ ಯರಜಂತಿ ಸೇರಿ ಇತರೆ ಪ್ರದೇಶದಲ್ಲಿ ಬಹುತೇಕ ರೈತರು ಎಳ್ಳು ಹಾಗೂ ಸಜ್ಜೆ ಬೆಳೆಯನ್ನು ಕಟಾವು ಮಾಡಿದ್ದಾರೆ. ಆದರೆ ರಾಶಿ ಮಾಡಲು ಮಳೆ ಅಡ್ಡಿಯಾಗಿದೆ. ಗೂಡುಗಳು ಮಳೆಗೆ ಸಿಕ್ಕಿ ಹಾಳಾಗುತ್ತಿವೆ.

ಗೂಡುಗಳು ಹಾಳಾದರೆ ಇಳುವರಿ ಸಿಗುವುದಿಲ್ಲ. ರೈತರು ನಷ್ಟ ಅನುಭವಿಸಬೇಕಾಗುತ್ತದೆ.

ಎಳ್ಳು ಹಾಗೂ ಸಜ್ಜೆ ಗೂಡುಗಳ ಮೇಲೆ ತಾಡಪಾಲ್‌ ಹಾಕಿ ಬೆಳೆ ರಕ್ಷಣೆ ಮಾಡಬೇಕಾದ ಸ್ಥಿತಿ ಎದುರಾಗಿದೆ ಎನ್ನುತ್ತಾರೆ ಗುರುಗುಂಟಾ ಗ್ರಾಮದ ರೈತ ಸೋನನಾಥ ನಾಯಕ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು