ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿರಂತರ ಅಧ್ಯಯನದಿಂದ ಕೃತಿ ರಚನೆ’

ದಿ.ರಾಜಲಕ್ಷ್ಮಿ ರಾಮಚಂದ್ರಪ್ಪ ದತ್ತಿ ಪ್ರಶಸ್ತಿ ಪ್ರದಾನ, ಕೃತಿಗಳ ಲೋಕಾರ್ಪಣೆ
Last Updated 29 ಮೇ 2022, 15:23 IST
ಅಕ್ಷರ ಗಾತ್ರ

ರಾಯಚೂರು: ಬರಗೂರು ರಾಮಚಂದ್ರಪ್ಪನವರು ಮಹಿಳೆಯರ ಕುರಿತು ಕಾಳಜಿ ಉಳ್ಳವರಾಗಿದ್ದಾರೆ. ಅವರ ಹೆಸರಿನಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಮಾಡುವುದು ಮಹಿಳಾ ಲೇಖಕರಿಗೆ ದೊಡ್ಡ ಕಾಣಿಕೆಯಾಗಿದೆ ಎಂದು‌‌ ಕಾದಂಬರಿಗಾರ್ತಿ ಕಾವ್ಯಶ್ರೀ ಮಹಾಗಾಂವಕರ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿ ಜಿಲ್ಲಾ ಘಟಕದಿಂದ ನಗರದ ಕನ್ನಡ ಭವನ ದಲ್ಲಿ ಭಾನುವಾರ ಆಯೋಜಿಸಿದ್ದ ದಿ. ರಾಜಲಕ್ಷ್ಮಿ ರಾಮಚಂದ್ರಪ್ಪನವರ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಡಾ.ಬರಗೂರು ರಾಮ ಚಂದ್ರಪ್ಪನವರ ಪತ್ನಿ ದಿ. ರಾಜಲಕ್ಷ್ಮಿ ರಾಮಚಂದ್ರಪ್ಪನವರ ದತ್ತಿ ಪ್ರಶಸ್ತಿಯು ಲಭಿಸಿರುವುದು ನನ್ನ ಸೌಭಾಗ್ಯ ಎಂದರು.

‘ಬರಗೂರು ರಾಮಚಂದ್ರಪ್ಪನವರು ರಾಯಚೂರಿನಲ್ಲಿ ನಡೆದ 82ನೇ ಅಖೀಲ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ರಾಯಚೂರಿನ ಸವಿನೆನಪಿಗಾಗಿ ಅವರ ಧರ್ಮಪತ್ನಿ ದಿ. ರಾಜಲಕ್ಷ್ಮಿ ರಾಮಚಂದ್ರಪ್ಪನವರ ಹೆಸರಿನಲ್ಲಿ ದತ್ತಿಯನ್ನು ಕೇಂದ್ರ ಸಾಹಿತ್ಯ ಪರಿಷತ್ತಿಗೆ ನೀಡಿದ್ದು ಅಂತಹ ಶ್ರೇಷ್ಠವಾದ ದತ್ತಿಯ ಪ್ರಶಸ್ತಿಯು ರಾಯಚೂರಿನ ಜಿಲ್ಲಾ ಸಾಹಿತ್ಯ ಪರಿಷತ್ತು ನನಗೆ ನೀಡಿ ಗೌರವಿಸಿದ್ದಕ್ಕಾಗಿ ಋಣಿಯಾಗಿದ್ದೇನೆ’ ಎಂದರು.

‘ನನ್ನ ಆರನೇ ವಯಸ್ಸಿನಿಂದಲೇ ನನ್ನ ತಂದೆ ತಾಯಿಗಳ ಪ್ರೇರಣೆಯಿಂದ ಬರೆಯುವುದನ್ನು ಕಲಿತೆ ಜೊತೆಗೆ ನನ್ನ ಸುತ್ತಲಿನ ಪರಿಸರ ಹಾಗೂ ಸಾಹಿತ್ಯಗಳ ಪ್ರೇರಣೆಯಿಂದ ಅನೇಕ ಕೃತಿ ಹಾಗೂ ಕಾದಂಬರಿಗಳನ್ನು ಬರೆದು ಇಂದು ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಲೇಖಕ ಗಿರಿರಾಜ ಹೊಸಮನಿಯವರ ‘ಕಾರುಣ್ಯದೊಡಲು‘ ಮತ್ತು ಡಾ.ಶಶಿಕಾಂತ ಕಾಡ್ಲೂರ ಅವರ ‘ಕಲ್ಯಾಣದ ಬೆಳಕು‘ ಎಂಬ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.

ಕೃತಿಗಳ ಪರಿಚಯ ಮಾಡಿದ ಲೇಖಕರು ಹಾಗೂ ಪತ್ರಕರ್ತ ವೀರೇಶ ಸೌದ್ರಿ ಮಾತನಾಡಿ, ಗದುಗಿನ ಸ್ವಾಮೀಜಿಯವರು ಒಂದು ಪೀಠಕ್ಕೆ ಸೀಮಿತವಾಗಿರದೇ ಸಮಾಜದ ಒಳತಿಗಾಗಿ ಶ್ರಮಿಸಿದ್ದಾರೆ. ಅವರ ಕುರಿತು ಕೃತಿ ರಚನೆ ಶ್ಲಾಘನೀಯ ಎಂದರು.

ನಗರಸಭೆ ಅಧ್ಯಕ್ಷೆ ಲಲಿತಾ ಆಂಜನೇಯ ಕಾರ್ಯಕ್ರಮ ಉದ್ಘಾಟಿಸಿ ದರು. ಸಾಹಿತಿ ವೀರಹನುಮಾನ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಲ್ವಿಡಿ ಕಾಲೇಜಿನ ಸಹ ಪ್ರಾಧ್ಯಾಪಕಿ ಅರುಣಾ ಹೀರೇಮಠ ಅಭಿನಂದನಾ ಭಾಷಣ ಮಾಡಿದರು.

ಕೃತಿಗಳ ಲೋಕಾರ್ಪಣೆ ಮಾಡಿದ ನಿವೃತ್ತ ಪ್ರಾಧ್ಯಾಪಕ ಜಿ.ವಿ.ಕೆಂಚನಗುಡ್ಡ ಮಾತನಾಡಿದರು.

ಕೃತಿಕಾರ ಗಿರಿರಾಜ್ ಹೊಸಮನಿ ಹಾಗೂ ಡಾ.ಶಶಿಕಾಂತ ಕಾಡ್ಲೂರ, ಸಾಹಿತಿ ಡಾ.ಜಯಲಕ್ಷ್ಮಿ ಮಂಗಳಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ಕಲಬುರಗಿ ಜಿಲ್ಲಾಧ್ಯಕ್ಷ ವಿಜಯ ಕುಮಾರ ಪಾಟೀಲ್ ತೇಗಲತಿಪ್ಪಿ, ಜಿ.ಸುರೇಶ, ದಾನಮ್ಮ ಸುಭಾಶ್ಚಂದ್ರ, ಸರ್ವಮಂಗಳ ಸಕ್ರಿ, ಮಲ್ಲಿಕಾರ್ಜುನ ಹಳ್ಳೂರು, ಆರ್.ವೀಣಾ, ಶಾಂತ ಕುಲಕರ್ಣಿ ಇದ್ದರು. ಲಕ್ಷ್ಮಿರೆಡ್ಡಿ ಹೊಸೂರು ಮತ್ತು ಪ್ರತಿಭಾ ಗೋನಾಳ ಪ್ರಾರ್ಥಿಸಿದರು. ಜಿಲ್ಲಾ ಗೌರವ ಕಾರ್ಯದರ್ಶಿ ತಾಯಪ್ಪ ಬಿ ಹೊಸೂರು ಸ್ವಾಗತಿಸಿದರು. ವಿಜಯ ರಾಜೇಂದ್ರ ನಿರೂಪಿಸಿದರು. ಕನ್ನಡ ಸಾಹಿತ್ಯ ಪರಿಷತ್ಯ ತಾಲ್ಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT