ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಸೈನಿಕರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ’

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಕಾರ್ಗಿಲ್‌ ವಿಜಯೋತ್ಸವ
Published : 30 ಜುಲೈ 2023, 15:27 IST
Last Updated : 30 ಜುಲೈ 2023, 15:27 IST
ಫಾಲೋ ಮಾಡಿ
Comments

ರಾಯಚೂರು: ‘ಮಳೆ, ಬಿಸಿಲು ಎನ್ನದೇ ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲೂ ದೇಶದ ಗಡಿ ಕಾಯುತ್ತಿರುವ ಸೈನಿಕರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಈ ದಿಸೆಯಲ್ಲಿ ಬದ್ಧತೆಯನ್ನು ಪ್ರದರ್ಶಿಸಿದೆ’ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಗಿಲ್‌ ವಿಜಯೋತ್ಸವ ಹಾಗೂ ನಿವೃತ್ತ ಸೈನಿಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘1999ರ ಜುಲೈ 26ರಂದು ದೇಶದ ಸೈನಿಕರು ಆರು ತಿಂಗಳ ಕಾಲ ಹೋರಾಡಿದರು. ಪಾಕಿಸ್ತಾನದ ಸೈನ್ಯವನ್ನು ಹಿಮ್ಮೆಟ್ಟಿಸಿ ವಿಜಯ ಪತಾಕೆ ಹಾರಿಸಿದರು. ಯುದ್ಧದಲ್ಲಿ ವೀರಮರಣ ಹೊಂದಿದ ಸೈನಿಕರನ್ನು ದೇಶದ ಜನ ಗೌರವಿಸಿದ್ದಾರೆ. ದಾನ ಧರ್ಮದ ಮೂಲಕ ಅವರಿಗೆ ನೆರವಾಗಿದ್ದಾರೆ. ಪ್ರೋತ್ಸಾಹಿಸಿದ್ದಾರೆ’ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಶಾಸಕ ಶಿವರಾಜ ಪಾಟೀಲ ಮಾತನಾಡಿ, ‘ಹವಾಮಾನ ವೈಪರೀತ್ಯದ ಮಧ್ಯೆಯೂ ದೇಶದ ಯೋಧರು ಕೆಚ್ಚೆದೆಯಿಂದ ಹೋರಾಡಿದರು. ಪಾಕಿಸ್ತಾನದ ಸೈನಿಕರನ್ನು ಮತ್ತೊಮ್ಮೆ ಭಾರತದ ನೆಲದತ್ತ ನೋಡದಂತೆ ಅಟ್ಟಿಸಿದ್ದಾರೆ’ ಎಂದರು.

‘ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿದೆ. ಸಂಸ್ಥೆ ಹಾಗೂ ಸಂಸ್ಥೆಯನ್ನು ನಡೆಸಿಕೊಂಡು ಹೊರಟಿರುವ ಅಕ್ಕ ಸ್ಮಿತಾ ಅವರಿಗೆ ಚಿರಋಣಿಯಾಗಿದ್ದೇವೆ’ ಎಂದು ಹೇಳಿದರು.

ಸ್ಮಿತಾ ಅಕ್ಕ ಮಾತನಾಡಿ, ‘ದೇಶದ ಸಂಸ್ಕತಿ, ರೀತಿ–ನೀತಿ, ಸಮಾಜ ಹಾಗೂ ಕುಟಂಬದಲ್ಲಿ ಶಾಂತಿ ಸೌಹಾರ್ದತೆ ನೆಲೆಗೊಳ್ಳುವಂತೆ ಮಾಡುವ ಯೋಧರು ನಾವಾದಾಗ ಮಾತ್ರ ದೇಶ ಸುಭದ್ರವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ದೇಶವನ್ನು ಕಾಯುತ್ತಿರುವ ಸಹಸ್ರರಾರು ಯೋಧರನ್ನು ನಾವೆಲ್ಲ ಗೌರವಿಸೋಣ. ರಾಷ್ಟ್ರದ ಸುಭದ್ರತೆಗೆ ಪಣ ತೊಡೋಣ’ ಎಂದು ಹೇಳಿದರು.

ಮಾಜಿ ಸೈನಿಕರಾದ ಕೆ.ಎಸ್‌.ರಾವ್, ಗೋಪಾಲ, ಸಿದ್ದಯ್ಯ ಸ್ವಾಮಿ ಅವರು ಕಾರ್ಗಿಲ್‌ ಯುದ್ಧದ ಸನ್ನಿವೇಶವನ್ನು ವಿವರಿಸಿದರು.

ಹಿರಿಯ ಪತ್ರಕರ್ತ ಚಂದ್ರಕಾಂತ ಎಂ.ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ 9 ವೀರಯೋಧರು, 1971 ರ ಯುದ್ಧದಲ್ಲಿ ಭಾಗವಹಿಸಿದ್ದ ನಾಲ್ವರು ವೀರಯೋಧರು, ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎಂಟು ಯೋಧರನ್ನೊಳಗೊಂಡು ಒಟ್ಟು 21 ಸೈನಿಕರನ್ನು ಸನ್ಮಾನಿಸಲಾಯಿತು.

ನಗರಸಭೆ ಸದಸ್ಯ ಜಯಣ್ಣ, ಮಾಜಿ ಸದಸ್ಯ ಶಿವಮೂರ್ತಿ ಹಾಗೂ ವಕೀಲ ದೇವಣ್ಣ ನಾಯಕ ಇದ್ದರು.

ಬಿ.ಕೆ.ಶಾರದಾ ಸ್ವಾಗತಿಸಿದರು. ಮಹಾಲಕ್ಷ್ಮಿ ಪ್ರಾರ್ಥನೆ ಗೀತೆ ಹಾಡಿದರು. ರಂಜಿತ್‍ಕುಮಾರ ನಿರೂಪಿಸಿದರು.

Highlights - ಸಂಘಕ್ಕೆ ಜಾಗ ಕೇಳಿದ ಮಾಜಿ ಸೈನಿಕರು ಧ್ವಜ ಹಿಡಿದು ಮಾಜಿ ಸೈನಿಕರಿಗೆ ಗೌರವ ಸಲ್ಲಿಕೆ ಸೈನಿಕರ ಪತ್ನಿಗೂ ಗೌರವ ಸಲ್ಲಿಸಿದ ಅಕ್ಕ ಸ್ಮಿತಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT