ದುರಸ್ತಿಯಾಗದ ಶುದ್ಧ ನೀರಿನ ಘಟಕ!

ಬುಧವಾರ, ಏಪ್ರಿಲ್ 24, 2019
30 °C

ದುರಸ್ತಿಯಾಗದ ಶುದ್ಧ ನೀರಿನ ಘಟಕ!

Published:
Updated:
Prajavani

ಹಟ್ಟಿಚಿನ್ನದಗಣಿ: ಪಟ್ಟಣದ ಶುದ್ಧ ಕುಡಿವ ನೀರಿನ ಘಟಕ ಸ್ಥಗಿತವಾಗಿ ತಿಂಗಳಾದರೂ ದುರಸ್ತಿ ಮಾಡಿಲ್ಲ. ಇದರಿಂದ ಜನರು ಪರದಾಡುವಂತಾಗಿದೆ.

ಪಟ್ಟಣದ 24 ಸಾವಿರ ಜನಸಂಖ್ಯೆಗೆ ಅನುಕೂಲವಾಗುವುದಕ್ಕೆ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯ್ತಿ ರಾಜ್ ಇಲಾಖೆಯಿಂದ ಶುದ್ದ ಕುಡಿವ ನೀರು ಘಟಕವನ್ನು ಸ್ಧಾಪಿಸಲಾಗಿದೆ. ಸಕಾಲಕ್ಕೆ ದುರಸ್ತಿಯಾಗದೆ ಕೆಟ್ಟಿವೆ. ಈ ಬಗ್ಗೆ ನಿರ್ವಹಣೆ ಮಾಡುವ ಸಿಬ್ಬಂದಿ ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಬಿಡಿ ಭಾಗಗಳ ಕೊರತೆಯಿಂದ ದುರಸ್ತಿ ವಿಳಂಬವಾಗುತ್ತಿದೆ ಎನ್ನುವ ಮಾತನ್ನು ಎಂಜಿನಿಯರರು ಹೇಳುತ್ತಿದ್ದಾರೆ. ಕೃಷ್ಣ ನದಿಯಿಂದ ವಾರ್ಡಿಗೆ ಪೂರೈಕೆಯಾಗುತ್ತಿದ್ದ ಕುಡಿವ ನೀರು ಸಹ ಸ್ಧಗಿತಗೊಂಡಿದೆ.

ಕೊಳವೆ ಭಾವಿಯಲ್ಲಿ ಆರ್ಸೆನಿಕ್‌ಯುಕ್ತ ನೀರು ಸಿಗುತ್ತಿರುವುದರಿಂದ ಕುಡಿಯಲು ಯೋಗ್ಯವಿಲ್ಲ. ಕುಡಿವ ನೀರಿಗಾಗಿ ಪರಿತಪಿಸುವಂತಾಗಿದೆ. ಕೊಡಗಳನ್ನು ಹಿಡಿದುಕೊಂಡು ಹಟ್ಟಿ ಚಿನ್ನದ ಗಣಿ ಕಾರ್ಮಿಕರು ವಾಸವಿರುವ ಕಾಲೋನಿಗಳಲ್ಲಿ ಜನರು ಅಲೆಯುವುದು ಕಂಡು ಬರುತ್ತದೆ. ಕೆಲವು ಕಡೆ ಕಂಪನಿ ಅಳವಡಿಸಿದ ಸಾರ್ವಜನಿಕ ನಳಗಳು ಇವೆ. ಇದರಿಂದ ಒಂದು ಕುಟುಂಬಕ್ಕೆ ಕೇವಲ ಒಂದು ಅಥವ ಎರಡು ಕೊಡವಷ್ಟೆ ನೀರು ಸಿಗುತ್ತದೆ. ಸುಮಾರು ಮೂರು ಕೀ ಮೀ ದೂರದಿಂದ ನೀರು ಹೊತ್ತು ತರಬೇಕು ಎಂದು ಶರಣುಬಸವ, ನಿಂಗಪ್ಪ ಮಲ್ಲಮ್ಮ ದುರುಗಮ್ಮ, ತಮ್ಮ ಅಳಲನ್ನು ತೋಡಿಕೊಂಡರು.

ಈ ಬಗ್ಗೆ ಪಟ್ಟಣ ಪಂಚಾಯಿತಿ ಸಿಬ್ಬಂದಿಯು ತಮ್ಮ ಜವಾಬ್ದಾರಿ ನಿಭಾಯಿಸುತ್ತಿಲ್ಲ. ಪಟ್ಟಣದ ಸಂತೆ ಬಜಾರ್‌ನಲ್ಲಿರುವ ಶುದ್ಧ ನೀರಿನ ಘಟಕವೂ ಕೆಟ್ಟು ನಿಂತಿದೆ

ನೀರಿಗಾಗಿ ಪರದಾಡುತ್ತಿರುವ ಜನರು, ಅಧಿಕಾರಿಗಳು ಕೂಡಲೇ ಅದನ್ನು ದುರಸ್ತಿಗೊಳಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !