ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಕಾಮಗಾರಿ ಸ್ಥಗಿತ: ತೊಂದರೆ

ರಾಮಜಿನಾಯ್ಕ ತಾಂಡಾ–- ಹಡಗಲಿ ಗ್ರಾಮಕ್ಕೆ ಸಂಪರ್ಕ ರಸ್ತೆ
Last Updated 7 ನವೆಂಬರ್ 2020, 1:59 IST
ಅಕ್ಷರ ಗಾತ್ರ

ಮುದಗಲ್: ಸಮೀಪದ ಛತ್ತರ ರಾಮಜಿನಾಯ್ಕ ತಾಂಡಾ- ಹಡಗಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಗ್ರಾಮಸ್ಥರ ಆರೋಪಿಸುತ್ತಾರೆ.

2016-17ನೇ ಸಾಲಿನ ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಡಿ ₹ 3.40. ಕೋಟಿಗಳಲ್ಲಿ, 4.3 ಕೀ.ಮಿ. ಉದ್ದ ರಸ್ತೆ ನಿರ್ಮಾಣ ಆಗಬೇಕಾಗಿದೆ. ಕಾಮಗಾರಿ ಆರಂಭಿಸಿ ಮೂರು ವರ್ಷಗಳಾಗಿವೆ. ಆರಂಭದಲ್ಲಿ ರಸ್ತೆಗೆ ಎರಡು ಬದಿಯಲ್ಲಿ ಆಗೆದು
ಮರಂ ಹಾಕಿ ಗಟ್ಟಿಗೊಳಿಸಿದ ಬಳಿಕ ಅರ್ಧ ಬಿಲ್ ಪಾವತಿಸಿಕೊಂಡು ಗುತ್ತಿಗೆದಾರ ಮೂರು ವರ್ಷದಿಂದ ನಾಪತ್ತೆಯಾಗಿದ್ದಾರೆ.

ಹಡಗಲಿ ಗ್ರಾಮದಲ್ಲಿ ರಸ್ತೆಗೆ ಅಡ್ಡಿ ಬಂದ 6 ಮನೆಗಳ ತೆರವುಗೊಳಿಸಿ ರಸ್ತೆ ನಿರ್ಮಿಸಿ ಕೊಡಿ ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದ್ದರಿಂದ ಕಾಮಗಾರಿ ಸ್ಥಗಿತಗೊಳಿಸಿ 1 ವರ್ಷವಾಗಿದೆ. ರಸ್ತೆಗೆ ಹಾಕಿದ ಮಣ್ಣು, ಕಂಕರ್ ಕಲ್ಲುಗಳಿಂದ ಸಂಚಾರಕ್ಕೆ ತೊಂದರೆಯಾಗಿದೆ. ಜನ-ಜಾನುವಾರುಗಳು ರಸ್ತೆಯಲ್ಲಿ ನಡೆದಾಡಲು ಆಗುತ್ತಿಲ್ಲ. ಆಟೊ, ಇತರೆ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ರಸ್ತೆಯಲ್ಲಿದ್ದ ಮೂರು ಕಡೆ ಹಳ್ಳ, ನಾಲಾ ಬರುವುದರಿಂದ ನಿರಂತರ ಹರಿಯುವ ನೀರಿಗೆ ರಸ್ತೆ ಕೊಚ್ಚಿ ಹೋಗಿದೆ. ತಗ್ಗು-ಗುಂಡಿಗಳು ನಿರ್ಮಾಣವಾಗಿವೆ. ರಸ್ತೆಗೆ ವಾಹನ ಸಂಚರಿಸಲು ಬಾರದಂತಾಗಿದೆ.

ರಸ್ತೆ ದುರಸ್ತಿ ಮಾಡಿಕೊಡಿ ಎಂದು ಮಾಜಿ ಶಾಸಕ ಪ್ರತಾಪಗೌಡರಿಗೆ ಅನೇಕ ಬಾರಿ ಮನವಿ ಮಾಡಿದ್ದಾರೆ. ರಸ್ತೆ ನಿರ್ಮಿಸದಿದ್ದರೇ ಲೋಕಸಭೆ ಚುನಾವಣೆ ಬಹಿಷ್ಕರಿಸುವಂತೆ ಇಲ್ಲಿನ ಜನರು ಪಟ್ಟು ಹಿಡಿದಾಗ ತಹಶೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿಗಳು ತಾಂಡಾಕ್ಕೆ ಭೇಟಿ ನೀಡಿ ತಿಂಗಳಲ್ಲಿಯೇ ರಸ್ತೆ ನಿರ್ಮಿಸಿ ಕೋಡುವುದಾಗಿ ಭರವಸೆ ನೀಡಿದ್ದರು. ಆದರೆ, ಭರವಸೆ ನೀಡಿ ವರ್ಷ ಕಳೆದರು ರಸ್ತೆ ದುರಸ್ತಿ ಆಗಿಲ್ಲ.

ಈಗ ಮಸ್ಕಿ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು, ಇಲ್ಲಿನ ಜನರು ಚುನಾಯಿತ ಪ್ರತಿನಿಧಿಗಳಿಗೆ ತಕ್ಕ ಉತ್ತರ ನೀಡುತ್ತೆವೆಂದು ಹಡಗಲಿ ಗ್ರಾಮದ ಬಸಪ್ಪ ಕುರುಬರ, ಛತ್ರಪ್ಪ ಕುರುಬರ್, ಹನುಮಪ್ಪ ಕುರುಬರ್, ಸಂತೋಷ ತುಗ್ಗಲಿ, ಬಸನಗೌಡ ಮಾಲೀ ಪಾಟೀಲ್, ಹನುಂತಪ್ಪ ಕುರುಬರ, ಛತ್ರಪ್ಪ ಕುರಬರ, ಸಂತೋಷ ರಾಮಪ್ಪನ ತಾಂಡಾ, ದುರುಗಪ್ಪ ರಾಮಪ್ಪನ ತಾಂಡಾ, ಶೇಟಪ್ಪ ನಾಯ್ಕ ರಾಮಪ್ಪ ತಾಂಡಾ, ಧರ್ಮಣ್ಣ ನಾಯ್ಕ ಲಿಂಬೇಪ್ಪನ ತಾಂಡಾ, ಪತ್ಯಪ್ಪ ಲಿಂಬೆಪ್ಪನ ತಾಂಡಾ, ರೆಡ್ಡಿ ಲಿಂಬೆಪ್ಪನ ತಾಂಡಾ, ರಾಜು, ಮಾನಪ್ಪ, ರವಿ, ಗುಂಡಪ್ಪ ಸೇರಿ ಸಾವಿರಾರು ಜನರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT