ಕೆಸರು ಗದ್ದೆಯಾದ ಸಂತೆ ಮೈದಾನ

7
ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ: ಸಾರ್ವಜನಿಕರ ಪರದಾಟ

ಕೆಸರು ಗದ್ದೆಯಾದ ಸಂತೆ ಮೈದಾನ

Published:
Updated:
Deccan Herald

ಹಟ್ಟಿ ಚಿನ್ನದ ಗಣಿ: ಪ್ರತಿ ಭಾನುವಾರ ಪಟ್ಟಣದಲ್ಲಿ ನಡೆಯುವ ವಾರದ ಸಂತೆ ಮೈದಾನ ಅಭಿವೃದ್ಧಿ ಮಾಡದ ಕಾರಣ ಶನಿವಾರ ರಾತ್ರಿ ಸುರಿದ ಮಳೆಗೆ ಕೆಸರು ಗದ್ದೆಯಾಗಿಮಾರ್ಪಟ್ಟಿದೆ. ಸಂತೆಗೆ ಬರುವ ವ್ಯಾಪಾರಸ್ಥರು ಮತ್ತು ಗ್ರಾಹಕರು ತೊಂದರೆ ಪಡುವಂತಾಗಿದೆ.

ತಾಲ್ಲೂಕಿನಲ್ಲಿಯೇ ಅತೀ ದೊಡ್ಡ ವಾರದ ಸಂತೆ ಎಂದು ಪ್ರಸಿದ್ಧಿ ಪಡೆದಿದೆ. ಆದರೆ,  ಮೂಲಸೌರ್ಕಯವಿಲ್ಲದೇ ಅವ್ಯವಸ್ಥೆಯ ಆಗರವಾಗಿದೆ. ತರಕಾರಿ ವ್ಯಾಪಾರಿಗಳಿಗೆ ಕಟ್ಟೆಗಳು ನಿರ್ಮಿಸಲಿಲ್ಲ. ಸಿಸಿ ರಸ್ತೆಗಳಿಲ್ಲ. ಮಳೆ ಬಂದರೆ ಸಂತೆ ಮೈದಾನ ಕೆಸರು ಗದ್ದೆ. ವ್ಯಾಪಾರಿಗಳು ಹಾಗೂ ಖರೀದಿದಾರರು ವ್ಯವಹಾರ ನಡೆಸಲು ಹರಸಾಹಸ ಪಡಬೇಕು. ತರಕಾರಿ ಖರೀದಿಗಾಗಿ ಸಂತೆಯಲ್ಲಿ ತಿರುಗಾಡಲು ಆಗುವುದಿಲ್ಲ. ಕಾಲು ಜಾರಿ ಬಿದ್ದು ಮೈತುಂಬ ರಾಡಿ ಹಚ್ಚಿಕೊಂಡು ಪಂಚಾಯಿತಿ ಆಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ ಎನ್ನುತ್ತಾರೆ ವ್ಯಾಪಾರಿಗಳು.

ಪ್ರತಿ ವರ್ಷ ಸಂತೆಯ ಕರ ವಸೂಲಿಯಿಂದ ₹ 8 ರಿಂದ 9 ಲಕ್ಷ ಆದಾಯವಿದೆ. ಆದರೆ,ಸಂತೆ ಮೈದಾನ ಅಭಿವೃದ್ಧಿಗೆ ಖರ್ಚು ಮಾಡಿಲ್ಲ. ಈ ಸಂತೆಗೆ ಸುತ್ತಮುತ್ತಲಿನ ಹಳ್ಳಿಗಳು ಅಲ್ಲದೆ ಅಕ್ಕ ಪಕ್ಕದ ತಾಲ್ಲೂಕುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ. ತೆ ಮೈದಾನ ಅತಿಕ್ರಮಣದಿಂದ ಸ್ಥಳದ ಅಭಾವ ಉಂಟಾಗಿ ತಿರುಗಾಡಲು ತೊಂದರೆಯಾಗುತ್ತಿದೆ ಎಂದು ಗ್ರಾಹಕರು ದೂರುತ್ತಾರೆ.

ಸಂತೆ ಮೈದಾನದಲ್ಲಿ ತರಕಾರಿ ಮಾರಲು ಕಟ್ಟೆಗಳು ನಿರ್ಮಿಸಬೇಕು. ಮೈದಾನ ತುಂಬೆಲ್ಲ ಸಿಸಿ ನೆಲ ಹಾಸು ಹಾಕಬೇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಬಿಡಾಡಿ ದನಗಳ ನಿಯಂತ್ರಣಕ್ಕೆ ಕ್ರಮ ಜರುಗಿಸಬೇಕು ಎಂದು ಸ್ಥಳೀಯ ವ್ಯಾಪಾರಿಗಳು ಹಾಗೂ ಗ್ರಾಹಕರು ಆಗ್ರಹಿಸಿದ್ದಾರೆ.

ತರಕಾರ ವ್ಯಾಪಾರಕ್ಕೆ ಕಟ್ಟೆಗಳು ನಿರ್ಮಿಸಿಲ್ಲ. ರಾಡಿಯಲ್ಲಿ ಕುಳಿತು ತರಕಾರಿ ಮಾರುತ್ತಿದೇವೆ. ನಮ್ಮಿಂದ ಕರ ವಸೂಲಿ ಮಾಡುತ್ತಾರೆ. ಆದರೆ, ಸೌಲಭ್ಯ ಮಾತ್ರ ಶೂನ್ಯ. ನಮ್ಮ ಗೋಳು ಯಾರ ಮುಂದೆ ಹೇಳಬೇಕು
- ದುರಗಮ್ಮ, ತರಕಾರಿ ಮಾರುವ ಮಹಿಳೆ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !