ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಕೊಡುಗೆಗೆ ಸಂದ ಗೌರವ

Last Updated 31 ಅಕ್ಟೋಬರ್ 2022, 7:15 IST
ಅಕ್ಷರ ಗಾತ್ರ

ರಾಯಚೂರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಂಸ್ಥಾಪಕರಲ್ಲಿ ಒಬ್ಬರಾದ ಹಾಗೂ ವಿಜ್ಞಾನವನ್ನು ಜನಪ್ರಿಯ ಮಾಡಲು ತಮ್ಮದೇ ಆದ ಕಾಣಿಕೆ ನೀಡಿರುವ ಡಾ. ಡಿ.ಆರ್.ಬಳೂರಗಿ ಅವರಿಗೆ ಈ‌ ವರ್ಷ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿರುವುದು ಅವರ ಅಪಾರ ಶಿಷ್ಯಬಳಗಕ್ಕೆ ಹರ್ಷ ಮೂಡಿಸಿದೆ.

ರಾಯಚೂರಿನ ಎಲ್‌ವಿಡಿ ಪದವಿ ಕಾಲೇಜಿನಲ್ಲಿ 33 ವರ್ಷ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, 2001 ರಲ್ಲಿ ನಿವೃತ್ತರಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ವಿಜ್ಞಾನ–ತಂತ್ರಜ್ಞಾನ ಕ್ಷೇತ್ರದ ಸಾಧಕರ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದಕ್ಕೆ ಅವರ ಶಿಷ್ಯ ಬಳಗವು ಹರ್ಷಗೊಂಡಿದೆ. ವಿಜ್ಞಾನ ವಿಷಯವನ್ನು ಇಂಗ್ಲಿಷ್‌ನಿಂದ ಕನ್ನಡ ಅರ್ಥ ಮಾಡಿಸುವ ಕೆಲಸವನ್ನು ಡಾ. ಡಿ.ಆರ್‌.ಬಳೂರಗಿ ಅವರು ಮಾಡಿದ್ದಾರೆ. ಮಾಸಪತ್ರಿಕೆಗಳು, ವಾರಪತ್ರಿಕೆಗಳಲ್ಲಿ ಹಾಗೂ ವಿಜ್ಞಾನ ಪರಿಷತ್‌ನ ಬಾಲ ವಿಜ್ಞಾನ ನಿಯತಕಾಲಿಕೆಯಲ್ಲಿ ಸಾಕಷ್ಟು ಲೇಖನಗಳು ಪ್ರಕಟವಾಗಿವೆ. ಭೌತಶಾಸ್ತ್ರಕ್ಕೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.

ಬೆಳಗಾವಿ ವಿಜ್ಞಾನ ಕೇಂದ್ರದ ನಿರ್ದೇಶಕರಾಗಿ ಮೂರು ವರ್ಷ ಕಾರ್ಯನಿರ್ವಹಿಸಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಕುಲಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ರಾಯಚೂರಿನ ಎಲ್‌ವಿಡಿ ಕಾಲೇಜಿನಲ್ಲಿಯೇ ಪ್ರಾಧ್ಯಾಪಕ ವೃತ್ತಿ ಆರಂಭಿಸಿ, ಅಲ್ಲಿಂದಲೇ ನಿವೃತ್ತರಾದರು.

ಮೂಲ ವಿಜಯಪುರ ಜಿಲ್ಲೆಯ ಸಾರವಾಡ ಗ್ರಾಮದವರು. ಕರ್ಮಭೂಮಿ ರಾಯಚೂರಿನಿಂದಲೇ ಅವರು ವಿಜ್ಞಾನ ಬೋಧನೆ ಮತ್ತು ಜನಪ್ರಿಯಗೊಳಿಸುವ ಕೆಲಸ ಮಾಡಿರುವುದು ವಿಶೇಷ.

ವಿಜ್ಞಾನ ಜನಪ್ರಿಯತೆ ಮಾಡುವವರನ್ನು ಗುರುತಿಸಲು ಕೇಂದ್ರ ಸರ್ಕಾರವು 1988 ರಲ್ಲಿ ಸ್ಥಾಪಿಸಿದ್ದ ಪ್ರಶಸ್ತಿಗೆ ಅದೇ ವರ್ಷ ಭಾಜನರಾಗಿದ್ದರು.

ರಾಜ್ಯೋತ್ಸವ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿರಲಿಲ್ಲ. ಈಗ ಪ್ರಶಸ್ತಿ ಬಂದಿರುವುದಕ್ಕೆ ಸಹಜವಾದ ಸಂತೋಷವಾಗಿದೆ ಎನ್ನುವುದು ಅವರ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT