ಸರ್ವತೋಮುಖ ಬೆಳವಣಿಗೆಗೆ ಸಹಕಾರಿ: ದಸ್ತಗಿರಸಾಬ್‌

7

ಸರ್ವತೋಮುಖ ಬೆಳವಣಿಗೆಗೆ ಸಹಕಾರಿ: ದಸ್ತಗಿರಸಾಬ್‌

Published:
Updated:
Deccan Herald

ರಾಯಚೂರು: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಮತ್ತು ಸ್ಕೌಟ್ಸ್-ಗೈಡ್ಸ್‌ನಲ್ಲಿ ತೊಡಗಿಸಿಕೊಳ್ಳುವುದರಿಂದ ಸರ್ವೋತೋಮುಖ ಬೆಳವಣಿಗೆಯಾಗಲು ಸಾಧ್ಯವಾಗುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರಿ ಪ್ರಾಚಾರ್ಯ ದಸ್ತಗಿರಿಸಾಬ್‌ ದಿನ್ನಿ ಹೇಳಿದರು.

ತಾಲ್ಲೂಕಿನ ದಿನ್ನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಆಯೋಜಿಸಿದ್ದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತಾನಾಡಿದರು.

ಗ್ರಾಮಿಣ ಭಾಗದ ಶಾಲೆಗಳಲ್ಲಿ ಸ್ಕೌಟ್ಸ್-ಗೈಡ್ಸ್ ಘಟಕಗಳು ಪ್ರಾರಂಭಿಸುವ ಮೂಲಕ ಮಕ್ಕಳು ವ್ಯಕ್ತಿತ್ವ ರೂಪಿಸಿಕೊಳ್ಳಲು ಅವಕಾಶ ನೀಡುತ್ತಿರುವ ಶ್ಲಾಘನೀಯ ಎಂದರು.

ಸ್ಕೌಟ್ಸ್‌ ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತ ಕೆ.ತಿಮ್ಮಯ್ಯ ಮಾತನಾಡಿ, ಬೆಡನ್ ಪೋವೆಲ್ ಅವರ ಆದರ್ಶಗಳನ್ನಿಟ್ಟುಕೊಂಡು ಸರಳ ಸಜ್ಜನಿಕೆಯ ಸಂಗಮೇಶ್ವರ ಸರ್ದಾರ ಹಾಗೂ ಆದರ್ಶ ವ್ಯಕ್ತಿತ್ವದ ಎಸ್.ಕೆ.ಪ್ರಭ ಹೆಸರಿನ ಘಟಕಗಳಲ್ಲಿ ತೊಡಗಿಸಿಕೊಂಡು ಮಕ್ಕಳು ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ ಎಂದು ಹೇಳಿದರು.

ಜಿಲ್ಲಾ ಆಯುಕ್ತರಾದ ಬಸವರಾಜ ಬೋರಡ್ಡಿ, ಕೆ.ಆಲಿಯಾ ಖಾನಂ ಮಾತನಾಡಿದರು. ರಾವುತರಾವ್ ಬರೂರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಕಾರ್ಯದರ್ಶಿ ಎಚ್.ಹನುಮಂತಪ್ಪ, ನರಸಿಂಹಮೂರ್ತಿ ದೇಸಾಯಿ ಮಾನವಿ, ಜಿಲ್ಲಾ ಸಂಘಟಕವಿಶ್ವನಾಥಗೌ , ನಾಗರತ್ನ ಪಾಟೀಲ ಯಾದಗಿರಿ, ವಿಜಯಲಕ್ಷ್ಮೀ, ಶಂಷಾದ್ ಬೆಗಂ, ದೇವೇಂದ್ರ ಕಟ್ಟಿಮನಿ, ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮೀ ತಿಮ್ಮಪ್ಪ, ಸಂಗಪ್ಪ, ಶ್ರೀನಿವಾಸ ನಾಯಕ, ತಾಯಪ್ಪ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !