ಸಿಂಧನೂರು: ಸಿಂಧನೂರು ಜಿಲ್ಲಾ ಕೇಂದ್ರವನ್ನಾಗಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಾದೇಶಿಕ ಆಯುಕ್ತರನ್ನು ವರದಿ ಕೇಳಿದೆ. ವೈಜ್ಞಾನಿಕ, ಶೈಕ್ಷಣಿಕ, ಸಾಮಾಜಿಕ ಅಂಶಗಳನ್ನು ಗುರುತಿಸಿ ವರದಿ ಕಳುಹಿಸಿಕೊಡಬೇಕು ಎಂದು ತಹಶೀಲ್ದಾರ್ಗೆ ಸೂಚಿಸಲಾಗಿದೆ.
ಜಿಲ್ಲಾ ಕೇಂದ್ರ ಸೃಜಿಸುವ ಉದ್ಧೇಶದಿಂದ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ರಾಜ್ಮಹಲ್ ಫಂಕ್ಷನ್ ಹಾಲ್ನಲ್ಲಿ ಸೋಮವಾರ ಸಭೆ ನಡೆಸಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ವರ್ತಕರ ಸಂಘ, ದಲಿತ ಪರ, ಕನ್ನಡ ಪರ, ಪ್ರಗತಿಪರ ಸಂಘಟನೆಗಳ ಮುಖಂಡರು ಸೇರಿದಂತೆ ವಿವಿಧ ಸಮಾಜ ಮತ್ತು ಪಕ್ಷಗಳ ಮುಖಂಡರು ಮಾತನಾಡಿ, ‘ಸರ್ಕಾರದ ಸೂಚನೆಯಂತೆ ತಹಶೀಲ್ದಾರ್ ವರದಿ ಕಳುಹಿಸುವ ಪೂರ್ವದಲ್ಲಿ ಸಾರ್ವಜನಿಕರಿಂದ ಸಿಂಧನೂರು ಜಿಲ್ಲಾ ಕೇಂದ್ರವಾಗುವ ಅವಶ್ಯಕತೆ ಮತ್ತು ಕೇಂದ್ರ ಸೃಜಿಸಲು ಅರ್ಹವಾಗಿರುವ ಅಂಶಗಳನ್ನು ಕುರಿತು ತಹಶೀಲ್ದಾರ್ಗೆ ವರದಿ ಒಪ್ಪಿಸಬೇಕು ಎಂದು ತೀರ್ಮಾನಿಸಲಾಯಿತು.

ಎರಡು ದಿನಗಳೊಳಗೆ ರೈತ ಮುಖಂಡ ಹನುಮನಗೌಡ ಬೆಳಗುರ್ಕಿ ಅವರು ಸಮಾಜದ ಎಲ್ಲಾ ವರ್ಗಗಳ ಪ್ರಾತಿನಿಧ್ಯದ ಆಧಾರದ ಮೇಲೆ ಅಭಿಪ್ರಾಯಗಳನ್ನು ಸಂಗ್ರಹಿಸಿ, ತಹಶೀಲ್ದಾರ್ಗೆ ಒಪ್ಪಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ಹನುಮನಗೌಡ ಬೆಳಗುರ್ಕಿ ಮಾತನಾಡಿ, ‘ಜಿಲ್ಲಾ ಹೋರಾಟ ಸಮಿತಿ ರಚನೆ ಮಾಡುವ ಪೂರ್ವದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸುವ ಅಗತ್ಯವಿದೆ. ಬಸನಗೌಡ ಬಾದರ್ಲಿ ಹಲವಾರು ಕನಸು ಕಟ್ಟಿಕೊಂಡಿದ್ದಾರೆ. ಅವರ ಕನಸು ನನಸಾಗಬೇಕಾದರೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡ ಹೋಗಬೇಕಾದ ಅವಶ್ಯಕತೆ ಇದೆ. ಭಾವುಕರಾಗಬಾರದು’ ಎಂದು ಕಿವಿಮಾತು ಹೇಳಿದರು.

ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಹುಸೇನಸಾಬ, ನಗರಸಭೆ ಮಾಜಿ ಸದಸ್ಯ ಕೆ.ಜಿಲಾನಿಪಾಷಾ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಅಶೋಕ ಜಯಣ್ಣಗೌಡ, ವಕೀಲರ ಸಂಘದ ಅಧ್ಯಕ್ಷ ಭೀಮನಗೌಡ ಕೋಳಬಾಳ, ಭಾರತೀಯ ವೈದ್ಯಕೀಯ ಸಂಘದ ತಾಲ್ಲೂಕು ಘಟಕದ ಮುಖಂಡ ಚನ್ನನಗೌಡ ಪಾಟೀಲ, ವೆಂಕನಗೌಡ ಮಲ್ಕಾಪುರ, ದಾಸರಿ ಸತ್ಯನಾರಾಯಣ, ಸೋಮನಗೌಡ ಬಾದರ್ಲಿ, ಧರ್ಮನಗೌಡ ಮಲ್ಕಾಪುರ, ಎಂ.ಎಸ್. ಶ್ರೀನಿವಾಸಗೌಡ, ಅಲ್ಲಮಪ್ರಭು ಪೂಜಾರ, ಖಾದರ ಸುಭಾನಿ, ಎಸ್.ದೇವೇಂದ್ರಗೌಡ, ಹಂಪಯ್ಯಸ್ವಾಮಿ ರ್ಯಾವಿಹಾಳ, ಗೌತಮ ಮೆಹ್ತಾ, ವೀರೇಶ, ಮಂಜುನಾಥ ಗಾಣಿಗೇರ, ಕಾರುಣ್ಯಾಶ್ರಮದ ಚನ್ನಬಸಯ್ಯ, ನಿರುಪಾದೆಪ್ಪ ಗುಡಿಹಾಳ, ಮಾದಯ್ಯಸ್ವಾಮಿ ಗುರುವಿನ, ಗುಂಡಯ್ಯ ಅಪ್ಪಾಜಿ, ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ, ಮೂರುಮೈಲ್ಕ್ಯಾಂಪ್ನ ಸೋಮನಾಥ ಶಿವಾಚಾರ್ಯರು, ಬಂಗಾರಿಕ್ಯಾಂಪ್ ಸದಾನಂದ ಶರಣರು, ಅಮರಗುಂಡಯ್ಯ ತಾತ ತುರ್ವಿಹಾಳ, ರೌಡಕುಂದಾ ಶ್ರೀಗಳು, ವಳಬಳ್ಳಾರಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ, ಬಳಗಾನೂರು ಶ್ರೀಗಳು, ಗೋನವಾರ ಅಬ್ಬಾಸ್ ಅಲಿ ತಾತಾ, ಪಿ.ಡಬ್ಲ್ಯುಡಿ ಕ್ಯಾಂಪ್ ಮೀರಜ್ ಮೌಲಾನಾ, ನಾರಾಯಣ ಬೆಳಗುರ್ಕಿ, ಎಚ್.ಎನ್. ಬಡಿಗೇರ, ಡಿ.ಎಚ್. ಪೂಜಾರ, ಬಾಬರ್ಪಾಷಾ ವಕೀಲ, ಕರೇಗೌಡ ಕುರುಕುಂದಿ, ಸಂತೋಷ ಅಂಗಡಿ, ಶರಣಪ್ಪ ಟೆಂಗಿನಕಾಯಿ, ವೈ.ನರೇಂದ್ರನಾಥ ಸಭೆಯಲ್ಲಿ ಭಾಗವಹಿಸಿದ್ದರು. ಪಂಪಯ್ಯಸ್ವಾಮಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.