ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು: ಬಿಸಿಲಿನಲ್ಲಿ ಆಮ್ಲೆಟ್ ತಯಾರಿಸಿದ ಯುವಕರು

Published 1 ಮೇ 2024, 22:06 IST
Last Updated 1 ಮೇ 2024, 22:06 IST
ಅಕ್ಷರ ಗಾತ್ರ

ಲಿಂಗಸುಗೂರು: ಪಟ್ಟಣದ ಸ್ವಾಮಿ ವಿವೇಕಾನಂದ ಬಡಾವಣೆಯ ಯುವಕರ ಗುಂಪೊಂದು ಬುಧವಾರ ಬಿಸಿಲಿನಲ್ಲಿ ಕಬ್ಬಿಣದ ತವಾ ಇಟ್ಟು ಆಮ್ಲೆಟ್ ತಯಾರಿಸಿ ತಿನ್ನುವ ಮೂಲಕ ಬಿಸಿಲಿನ ಪ್ರಖರತೆಗೆ ಕನ್ನಡಿ ಹಿಡಿದರು.

‘ಬಿಸಿಲಿನ ಝಳಕ್ಕೆ ರೋಸಿ ಹೋಗಿದ್ದೇವೆ. ಕುತೂಹಲಕ್ಕಾಗಿ ಬಿಸಿಲಿನಲ್ಲಿ ಆಮ್ಲೆಟ್ ಮಾಡುವ ಪ್ರಯೋಗ ಮಾಡಿದೆವು. ಒಂದೂವರೆ ಗಂಟೆಯಲ್ಲಿ ತವಾ ಕಾಯಿತು. ಬಳಿಕ ಆಮ್ಲೆಟ್ ಮಾಡಿ ತಿಂದೆವು’ ಎಂದು ಯುವಕ ಪ್ರಭು ಗಸ್ತಿ ತಿಳಿಸಿದರು.

ಜಿಲ್ಲೆಯಾದ್ಯಂತ ಒಂದು ವಾರದಿಂದ ಪ್ರತಿದಿನ 44ರಿಂದ 45 ಡಿಗ್ರಿ ಸೆಲ್ಸಿಯಸ್‍ ಗರಿಷ್ಠ ಉಷ್ಠಾಂಶ ದಾಖಲಾಗುತ್ತಿದೆ.

ಬಿಸಿಲಿನಲ್ಲಿ ತವಾ ಮೇಲೆ ಆಮ್ಲೆಟ್ ತಯಾರಿಸಿದರು
ಬಿಸಿಲಿನಲ್ಲಿ ತವಾ ಮೇಲೆ ಆಮ್ಲೆಟ್ ತಯಾರಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT