ಲಿಂಗಸುಗೂರು: ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿಡಾ. ಅಂಬೇಡ್ಕರ್ ಭಾವಚಿತ್ರ ತೆರವುಗೊಳಿಸಿದ್ದನ್ನುಖಂಡಿಸಿ ಆಯೋಜಿಸಿದ್ದ ಪ್ರತಿಭಟನೆ ಸಂದರ್ಭದಲ್ಲಿ ಕೆಲವರು ಬಸ್ ನಿಲ್ದಾಣದ ಗೋಪುರದ ಮೇಲೆ ಟಿಪ್ಪು ಸುಲ್ತಾನ್ ಸಂಘದ ಧ್ವಜ ಅಳವಡಿಸಿದ್ದರಿಂದ ಕೆಲ ಸಮಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು.

ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿದ್ದ ಪ್ರತಿಭಟನೆ ಗುರುವಾರ ಮಧ್ಯಾಹ್ನ ಬಸ್ ನಿಲ್ದಾಣದತ್ತ ಬರುತ್ತಿದ್ದಂತೆ ಪ್ರತಿಭಟನೆಯಲ್ಲಿದ್ದ ಕೆಲ ಯುವಕರು ಏಕಾಏಕಿ ಬಸ್ ನಿಲ್ದಾಣದ ಒಳಗಡೆ ನುಗ್ಗಿ ಕಟ್ಟಡದ ಗೋಪುರದ ಮೇಲೆ ಏರಿ ಧ್ವಜ ಕಟ್ಟಿ ಜಯಘೋಷ ಹಾಕಿದರು. ತಕ್ಷಣವೇ ಎಚ್ಚೆತ್ತುಕೊಂಡ ಮುಖಂಡರು ಧ್ವಜ ತೆರವುಗೊಳಿಸಿದರು.

ಡಿವೈಎಸ್ಪಿ ಎಸ್.ಎಸ್. ಹುಲ್ಲೂರು ಹಾಗೂ ಪೊಲೀಸ್ ಅಧಿಕಾರಿಗಳು ಬಸ್ ನಿಲ್ದಾಣದಲ್ಲಿ ಜರುಗಿದ ಘಟನೆ ನಿಯಂತ್ರಿಸಲು ಹರಸಾಹಸ ಪಟ್ಟರು. ಧ್ವಜ ಕಟ್ಟಿದ ಯುವಕರನ್ನು ಕರೆದೊಯ್ಯಲು ಬಿಡದೆ ಪೊಲೀಸರಿಗೆ ಪ್ರತಿಭಟನಕಾರರು ಅಡ್ಡಿಪಡಿಸಿದರು.

ಪ್ರಕರಣ ದಾಖಲು: ‘ಬಡಿಗೆ, ಧ್ವಜಗಳನ್ನು ಹಿಡಿದು ಒಳ ನುಗ್ಗಿದ 150ಕ್ಕೂ ಹೆಚ್ಚು ಯುವಕರು ಕರ್ತವ್ಯಕ್ಕೆ ಅಡ್ಡಿಪಡಿಸಿ,ಸಾರ್ವಜನಿಕ ಕಟ್ಟಡದ ಮೇಲೆ ಧ್ವಜ ಕಟ್ಟುವ ಜೊತೆಗೆ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಸಂಚು ನಡೆಸಿದ್ದಾರೆ’ ಎಂದು ಬಸ್ ನಿಲ್ದಾಣದ ಕಂಟ್ರೋಲರ್ ಮುರ್ತುಜಾಸಾಬ ಹಜರಲಿ ಸಾಬ್ ದೂರು ನೀಡಿದ್ದು,ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.