ನೂರು ದಿನಗಳ ಕೆಲಸ ನೀಡಲು ಒತ್ತಾಯ

7

ನೂರು ದಿನಗಳ ಕೆಲಸ ನೀಡಲು ಒತ್ತಾಯ

Published:
Updated:
Deccan Herald

ರಾಯಚೂರು: ನರೇಗಾ ಯೋಜನೆಯಡಿ ಪ್ರತಿಯೊಂದು ಕುಟುಂಬಕ್ಕೂ 100 ದಿನಗಳ ಕೆಲಸವನ್ನು ಒದಗಿಸಬೇಕು ಎಂದು ಒತ್ತಾಯಿಸಿ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ ಸದಸ್ಯರು ನಗರದ ಡಾ. ಬಿ.ಆರ್.ಅಂಬೇಡ್ಕರ್‌ ವೃತ್ತದಲ್ಲಿ ಬುಧವಾರ ಧರಣಿ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ, ನರೇಗಾ ಯೋಜನೆಯಡಿ ಕೇಂದ್ರ ಸರ್ಕಾರ ಪ್ರತಿಯೊಂದು ಕುಟುಂಬಕ್ಕೆ ನೂರು ದಿನಗಳ ಉದ್ಯೋಗ ನೀಡುತ್ತಿದ್ದು, ರಾಜ್ಯ ಸರ್ಕಾರ ಈ ಯೋಜನೆಯನ್ನು ಸಮರ್ಪಕ ಅನುಷ್ಠಾನಗೊಳಿಸಿ ಪ್ರತಿಯೊಂದು ಕುಟುಂಬಕ್ಕೂ ನೂರು ದಿನಗಳ ಕೆಲಸ ನೀಡಬೇಕು ಎಂದು ಆಗ್ರಹಿಸಿದರು.

ನರೇಗಾ ಯೋಜನೆಯ ಕಾಯ್ದೆಯ ಪ್ರಕಾರ ಕೂಲಿಕಾರ್ಮಿಕರಿಗೆ 15 ದಿನಗಳಲ್ಲಿ ವೇತನ ಪಾವತಿ ಮಾಡಬೇಕಾಗಿದೆ. ಆದರೆ, ಕಾನೂನು ಉಲ್ಲಂಘನೆ ಮಾಡಿ ವಿಳಂಬವಾಗಿ ವೇತನ ನೀಡಲಾಗುತ್ತಿದೆ. ಆದ್ದರಿಂದ ಅಧಿಕಾರಿಗಳಿಗೆ ದಂಡ ಹಾಕಿ ಕಾನೂನು ಕ್ರಮ ಜರುಗಿಸಬೇಕು ಎಂದರು.

ಹುಸೇನಮ್ಮ, ಶಿವಮ್ಮ, ಸುನೀತಮ್ಮ, ಅನ್ನಪೂರ್ಣ, ಅಯ್ಯಮ್ಮ, ಬಸಮ್ಮ, ನರಸಮ್ಮ, ರೇಣಮ್ಮ, ಬಸವರಾಜ, ರಾಘವೇಂದ್ರ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !