ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಸಿಎಂ ಸೂಚನೆ ಅನುಸರಿಸದ ಅಧಿಕಾರಿಗಳು’: ಶ್ರೀನಿವಾಸ್‌ ಪುಜಾರಿ ಆರೋಪ

Last Updated 28 ಡಿಸೆಂಬರ್ 2018, 16:19 IST
ಅಕ್ಷರ ಗಾತ್ರ

ರಾಯಚೂರು: ‘ಬಡವರು ಮನೆ ಕಟ್ಟಿಕೊಳ್ಳಲು ಬೇಕಾಗುವ ಮರಳನ್ನು ಎತ್ತಿನ ಬಂಡಿ, ಟ್ರ್ಯಾಕ್ಟರ್‌ಗಳಲ್ಲಿ ತೆಗೆದುಕೊಂಡು ಹೋಗುವುದಕ್ಕೆ ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸೂಚನೆ ನೀಡಿದ್ದರೂ ಯಾವುದೇ ಜಿಲ್ಲಾಧಿಕಾರಿ, ತಹಸೀಲ್ದಾರ್‌ರು ಪಾಲನೆ ಮಾಡುತ್ತಿಲ್ಲ. ಇಂತಹ ಸ್ಥಿತಿ ಇದ್ದಾಗ ಸಿಎಂ ಆಡಳಿತ ಏಕೆ ನಡೆಸಬೇಕು’ ಎಂದು ವಿಧಾನಪರಿಷತ್ ಪ್ರತಪಕ್ಷದ ನಾಯಕ ಕೋಟಾ ಶ್ರೀನಿವಾಸ್‌ ಪುಜಾರಿ ಅವರು ಪ್ರಶ್ನಿಸಿದರು

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಡವರು ಮನೆ ಕಟ್ಟಿಕೊಳ್ಳಲು ಮಂಜೂರಾಗುವ ಹಣದಲ್ಲಿ ಅರ್ಧಕ್ಕಿಂತ ಹೆಚ್ಚು ಮರಳಿಗಾಗಿ ವೆಚ್ಚವಾಗುತ್ತಿದೆ. ಮರಳು ಖರೀದಿ ಸಾಧ್ಯವಾಗದೆ ಬಹಳಷ್ಟು ಬಡವರು ಮನೆಯನ್ನೆ ಕಟ್ಟಿಕೊಂಡಿಲ್ಲ. ಇದನ್ನು ಸದನಲ್ಲಿ ಪ್ರಸ್ತಾಪಿಸಿದಾಗ, ಎಲ್ಲರೂ ವಾಸ್ತವಾಂಶ ಒಪ್ಪಿದ್ದಾರೆ. ಬಡವರು ಮರಳು ತೆಗೆದುಕೊಳ್ಳುವುದಕ್ಕೆ ಅಡ್ಡಿಪಡಿಸಬಾರದು ಎಂದು ಮುಖ್ಯಮಂತ್ರಿ ಅವರು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ. ಯಾವ ಅಧಿಕಾರಿಯೂ ಮಾತು ಪಾಲನೆ ಮಾಡುತ್ತಿಲ್ಲ’ ಎಂದರು.

‘ಮರಳಿನ ವಿಷಯದಲ್ಲಿ ಸರ್ಕಾರ ನಿರ್ಲಿಪ್ತವಾಗಿದೆ. ಗುಂಡಾಗಳ ಕೈಗೆ ಮರಳು ಗಣಿಗಾರಿಕೆ ನೀಡಿದೆ. ರಾಯಚೂರಿನಲ್ಲಿ ಕೊಲೆಯಾದ ಗ್ರಾಮ ಲೆಕ್ಕಿಗ ಸಾಹೇಬ್‌ ಪಟೇಲ್‌ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಡಿಕ್ಕಿ ಹೊಡೆದ ಮರಳಿನ ಟಿಪ್ಪರ್‌ ರಾಯಲ್ಟಿ ಪಡೆದಿರಲಿಲ್ಲ ಎಂಬುದು ಬಯಲಾಗಿದೆ. ಮರಳು ದಂಧೆಯ ಎಲ್ಲ ಅಕ್ರಮಗಳನ್ನು ಬಯಲಿಗೆ ತರಲು ಉನ್ನತ ಮಟ್ಟದ ತನಿಖೆ ನಡೆಸಬೇಕು. ಇದಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT